ಬಂಧು-ಬಳಗಕ್ಕೆ ಆಮಂತ್ರಣ ಪತ್ರಿಕೆ ಹಂಚಿ, ಲಕ್ಷಾಂತರ ರೂಪಾಯಿ ಕೊಟ್ಟು ಮದುವೆ ಮಂಟಪ ಬುಕ್ ಮಾಡಿ, ಒಡವೆ, ಪೂಜಾರಿ, ಶಾಸ್ತ್ರಗಳು, ಊಟ, ವರೋಪಚಾರ ಸೇರಿದಂತೆ ಸಾಕಷ್ಟು ಖರ್ಚು ಮಾಡಿ ವಿವಾಹ ಮಾಡಿಸಲು ಮುಂದಾಗಿದ್ದ ಪೋಷಕರಿಗೆ ಈ ಯುವತಿ ಕೊಟ್ಟಿದ್ದು ಅಕ್ಷರಶಃ ಆರ್ಥಿಕ ನಷ್ಟ, ಮಾನನಷ್ಟ ಮತ್ತು ತುಂಬಲಾರದ ದುಃಖ. ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮಂಟಪದಿಂದ ಎದ್ದು, ತಾನು ಪ್ರೀತಿಸುತ್ತಿದ್ದ ಹುಡುಗನ ಪಕ್ಕದಲ್ಲಿ ನಿಂತು, ಇವನೇ ನನ್ನ ಜೀವ ಎಂದ ಯುವತಿ ಮಾತುಗಳು ಇಡೀ ಮಂಟಪದಲ್ಲಿದ್ದವರನ್ನು ಅಚ್ಚರಿಗೊಳಿಸಿತು.