ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿರುವ ಅವರ ಪದ್ಧತಿಗಳ ಪ್ರಕಾರ, ವರ ಶಿವಗಂಗರಾಜು ವಧುವಿನಂತೆ ಸೀರೆ, ರವಿಕೆ, ಕುತ್ತಿಗೆಗೆ ಆಭರಣ ಮತ್ತು ಕೈಗಳಲ್ಲಿ ಬಳೆಗಳನ್ನು ಧರಿಸಿದ್ದರು. ಅದೇ ರೀತಿ ವಧು ನಂದಿನಿ ಪಂಚೆ, ಶರ್ಟ್ ಹಾಗೂ ತಲೆಯ ಮೇಲೆ ಪೇಟಾ ಧರಿಸಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ಮಂದಿ ಹುಬ್ಬೇರಿಸಿದ್ದಾರೆ.