ಏ.23ರಂದು ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಪಕ್ಷವಾದ ಟಿವಿಕೆಗೆ ಮತ ನೀಡಿ, ಅಭೂತಪೂರ್ವ ಗೆಲುವಿಗೆ ಕಾರಣರಾಗಿ ಎಂದು ವಿಜಯ್ ರ್ಯಾಲಿಯಲ್ಲಿ ಕೇಳುತ್ತಿದ್ದರು. ಇದೇ ಸಮಯದಲ್ಲಿ ಡಿಎಂಕೆ ಮೈತ್ರಿಕೂಟ ಮತ್ತು ಎನ್‌ಡಿಎ ಮೈತ್ರಿಕೂಟದ ಎದುರು ಗೆಲುವಿಗಾಗಿ ಪಣತೊಟ್ಟಿದ್ದ ಟಿವಿಕೆಗೆ ಯಾರೊಬ್ಬರು ಮತ ನೀಡಬೇಡಿ ಎಂದು ಬೀದಿ ಬೀದಿಗಳಲ್ಲಿ ಬ್ಯಾನರ್, ಪೋಸ್ಟರ್ ಹಿಡಿದು ಅಪಪ್ರಚಾರ ಮಾಡಿದ ಬಿಗ್ಬಾಸ್ ಸ್ಪರ್ಧಿ, ನಟಿಗೆ ಸದ್ಯ ವಿಜಯ್ ಅವರ ಗೆಲುವಿನಿಂದ ಭಾರೀ ಮುಖಭಂಗ ಉಂಟಾಗಿದೆ ಎಂಬುದರಲ್ಲಿ ಅನುಮಾನವೇ ಬೇಡ.