ಮುಂದುವರೆದು ಮಾತನಾಡಿದ ಮೋದಿ, ದಾಳಿಯ ಪರಿಣಾಮವಾಗಿ ಎಲ್‌ಇಟಿ, ಜೆಇಎಂ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಭಾರತೀಯ ಸೇನೆ ನೆಡೆಸಿದ ದಾಳಿ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಪಾಕಿಸ್ತಾನದ ಡಿಜಿಎಂಒ ಮೇ 10 ರಂದು ಕದನ ವಿರಾಮಕ್ಕೆ ಕರೆ ನೀಡಿದರು ಎಂದು ತಿಳಿಸಿದ್ದಾರೆ. ಸಿಂಧೂರವು ಕುಟುಂಬದ ಪಾವಿತ್ರ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಈ ಧ್ಯೇಯವು ರಾಷ್ಟ್ರದ ಹೆಣ್ಣುಮಕ್ಕಳು ಮತ್ತು ಸಹೋದರಿಯರಿಗೆ ನ್ಯಾಯಕ್ಕಾಗಿ ಪ್ರತಿಜ್ಞೆಯಾಗಿತ್ತು. ಈ ಕಾರ್ಯಾಚರಣೆಯು ಆತ್ಮನಿರ್ಭರ್ ರಕ್ಷಣಾ ತಂತ್ರಜ್ಞಾನವನ್ನು ಅವಲಂಬಿಸಿದೆ ಎಂಬ ಅಂಶದ ಬಗ್ಗೆ ಹೆಮ್ಮೆಪಟ್ಟಿದ್ದಾರೆ.