ವಾರದಲ್ಲಿ 2 ದಿನ ಕಡ್ಡಾಯ ‘ವರ್ಕ್ ಫ್ರಂ ಹೋಮ್’: ದೆಹಲಿ ಸಿಎಂ ರೇಖಾ ಗುಪ್ತಾ ಮಹತ್ವದ ಆದೇಶ! Work From Home in Delhi

ದೆಹಲಿಯಲ್ಲಿ ಎರಡು ದಿನ ಸರ್ಕಾರಿ ನೌಕರರಿಗೆ ಕಡ್ಡಾಯ ವರ್ಕ್​ ಫ್ರಂ ಹೋಮ್​ ಜಾರಿಗೆ
ದೆಹಲಿಯಲ್ಲಿ ಎರಡು ದಿನ ಸರ್ಕಾರಿ ನೌಕರರಿಗೆ ಕಡ್ಡಾಯ ವರ್ಕ್​ ಫ್ರಂ ಹೋಮ್​ ಜಾರಿಗೆ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿ ಆರ್ಥಿಕ ಸ್ಥಿರತೆ ಕಾಪಾಡುವ ಹಿನ್ನಲೆ
  • ದೆಹಲಿಯಲ್ಲಿ ಎರಡು ದಿನ ಸರ್ಕಾರಿ ನೌಕರರಿಗೆ ಕಡ್ಡಾಯ ವರ್ಕ್​ ಫ್ರಂ ಹೋಮ್​ ಜಾರಿಗೆ
  • ದೆಹಲಿ ಸಿಎಂ ರೇಖಾ ಗುಪ್ತಾ ಅವರಿಂದ ಮಹತ್ವದ ಆದೇಶ
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ, ದೇಶದಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಿ ಎಂಬ ಮನವಿಗೆ ಅನುಗುಣವಾಗಿ ಗುರುವಾರ (ಮೇ.14) ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಸರ್ಕಾರಿ ನೌಕರರಿಗೆ ಕಡ್ಡಾಯವಾಗಿ ಎರಡು ದಿನ ವರ್ಕ್​ ಫ್ರಂ ಹೋಮ್​ (Work From Home in Delhi) ನ್ನು ಘೋಷಿಸಿದ್ದಾರೆ.
ರಾಜ್ಯದಲ್ಲಿ ಪೆಟ್ರೋಲ್​ ಬಳಕೆಯನ್ನು ಕಡಿತಗೊಳಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಕೆಲವೇ ದಿನಗಳಲ್ಲಿ ಈ ನಿಯಮವನ್ನು ಖಾಸಗಿ ವಲಯ ಕೂಡ ಪಾಲಿಸಬೇಕಾದ ನೀತಿಯನ್ನು ಜಾರಿಗೆ ತರುವುದಾಗಿ ರೇಖಾ ಗುಪ್ತಾ ತಿಳಿಸಿದ್ದಾರೆ.
ಪ್ರಧಾನಿ ಮಂತ್ರಿಗಳ ನಿರ್ದೇಶನದಂತೆ ಬೆಂಗಾವಲಿನ ವಾಹನಗಳ ಸಂಖ್ಯೆಯನ್ನು ಸಹ ಕಡಿತಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ವಾರಕ್ಕೊಂದು ದಿನ ವಾಹನ ರಹಿತ ದಿನವನ್ನಾಗಿ ಆಚರಿಸಲಾಗುವುದೆಂದು ಅವತರು ಹೇಳಿದ್ದಾರೆ.
ದೆಹಲಿಯಲ್ಲಿ ಸಾರ್ವಜನಿಕ ಸಾರಿಗೆಗೆ ಉತ್ತೇಜನವನ್ನು ನೀಡಲಾಗುವುದು, ಜೊತೆಗೆ ಶೇ.50 ರಷ್ಟು ಮೀಟಿಂಗ್​ಗಳನ್ನು ಆನ್​ಲೈನ್​ ಮೂಲಕವೇ ನಡೆಸುವಂತೆ ಸೂಚನೆ ನೀಡಲಾಗಿದೆ. ಜಿಲ್ಲಾ ಹಾಗೂ ಮುಖ್ಯನ್ಯಾಯಾಲಯಗಳು ಸಹ ಆನ್​ಲೈನ್​ ಮೂಲಕ ಕಾರ್ಯನಿರ್ವಹಿಸುತ್ತಿರುವ ಕಾರಣ, ಕೆಲಸಗಳು ಬೇಗ ಆಗುತ್ತಿದೆ ಎಂದು ದೆಹಲಿ ಸಿಎಂ ತಿಳಿಸಿದ್ದಾರೆ.
ದೆಹಲಿ ನಿವಾಸಿಗಳು ತಮ್ಮ ಹೆಚ್ಚಿನ ಪ್ರಯಾಣವನ್ನು ಮೆಟ್ರೋ ಮೂಲಕವೇ ನಡೆಸಿ ಜೊತೆಗೆ ಅನಗತ್ಯ ಪ್ರವಾಸ ಅಥವಾ ವಿದೇಶಿ ಪ್ರವಾಸಗಳನ್ನು ಸ್ಪಲ್ಪ ಸಮಯ ಮುಂದೂಡುವುದು ಉತ್ತಮ ಎಂದು ರೇಖಾ ಗುಪ್ತಾ ವಿನಂತಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net