ಇತ್ತೀಚಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ ತಾಂತ್ರಿಕ ಲೋಕದಲ್ಲಿ ಕ್ರಾಂತಿ ಮಾಡುತ್ತಿರುವುದು ನಿಜ
ಈ ತ್ವರಿತ ಏರಿಕೆಯಿಂದ ಉದ್ಯೋಗ ಮಾರುಕಟ್ಟೆಯಲ್ಲಿ ನಿರುದ್ಯೋಗದ ಸಮಸ್ಯೆಗಳು ಹೆಚ್ಚಾಗುತ್ತಿವೆ
ಅರ್ಹತೆ ಇದ್ದರೂ ಕೂಡಾ ಕೆಲಸ ಸಿಗದೇ ಯುವಕರನ್ನು ಬೀದಿಗಿಳಿಯುವಂತೆ ಮಾಡಿದೆ
ಚಾಲಕನು ಕೆಲಸವನ್ನು ಪಡೆಯಲು ಪ್ರಯಾಣಿಕರಿಂದ ಸಲಹೆಗಳನ್ನು ಪಡೆಯುತ್ತಿದ್ದಾನೆ
ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ ತಾಂತ್ರಿಕ ಲೋಕದಲ್ಲಿ ಕ್ರಾಂತಿ ಮಾಡುತ್ತಿರುವುದು ನಿಜ. ಈ ತ್ವರಿತ ಏರಿಕೆಯಿಂದ ಉದ್ಯೋಗ ಮಾರುಕಟ್ಟೆಯಲ್ಲಿ ನಿರುದ್ಯೋಗದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅರ್ಹತೆ ಇದ್ದರೂ ಕೂಡಾ ಕೆಲಸ ಸಿಗದೇ ಯುವಕರನ್ನು ಬೀದಿಗಿಳಿಯುವಂತೆ ಮಾಡಿದೆ. ಇದಕ್ಕೆ ಉದಾಹರಣೆಯೆಂದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಬ್ಬ ರಾಪಿಡೊ ಚಾಲಕನ (Rapido Driver Story) ಮನ ಮಿಡಿಯುವ ಕಥೆ.
ಸಾಕ್ಷಿ ಎಂಬ ಮಹಿಳೆಯೊಬ್ಬಳು ಈ ಕಥೆಯನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ಚಾಲಕನು ಕೆಲಸವನ್ನು ಪಡೆಯಲು ಪ್ರಯಾಣಿಕರಿಂದ ಸಲಹೆಗಳನ್ನು ಪಡೆಯುತ್ತಿದ್ದಾನೆ ಎಂದು ವಿವರಿಸಿದ್ದಾರೆ.
ಕೆಲವು ದಿನಗಳ ಹಿಂದೆ, ಕೆಲಸದಿಂದ ಹಿಂತಿರುಗುವ ಸಮಯದಲ್ಲಿ ರಾಪಿಡೊ ಬುಕ್ ಮಾಡಿಕೊಂಡಿದ್ದೆ. ಇದ್ದಕ್ಕಿಂದತೆಯೇ, ಅವರು ಕೆಲಸಕ್ಕಾಗಿ ಏನು ಮಾಡುತ್ತೀರಾ ಎಂದು ಕೇಳಿದರು. ನಾನು ಕೆಲಸ ಮಾಡುತ್ತಿರುವ ಸಂಸ್ಥೆಯ ಬಗ್ಗೆ ಹೇಳಿದಾಗ, ಅವನ ಧ್ವನಿಯಲ್ಲಿ ಒಂದು ರೀತಿಯ ನಿರೀಕ್ಷೆ ಮೂಡಿತು.
ಅವರು ತನ್ನ ದೈನಂದಿನ ಅಗತ್ಯಗಳನ್ನು ಪೂರೈಸಲು ಸ್ಥಿರವಾದ ಕೆಲಸವನ್ನು ಹುಡುಕುತ್ತಿರುವುದಾಗಿ ಅತ್ಯಂತ ವಿನಯವಾಗಿ ಹೇಳಿಕೊಂಡರು. ಕೇವಲ ಬೈಕ್ ಟಾಕ್ಸಿ ಓಡಿಸುವುದರಿಂದ ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ. ನನ್ನನ್ನು ನಿಮ್ಮ ಕಂಪನಿಯಲ್ಲಿಯೋ ಅಥವಾ ನಿಮಗೆ ತಿಳಿದಿರುವ ಬೇರೆ ಕಡೆಯೋ ರೆಫರ್ ಮಾಡಬಹುದೇ ಎಂದು ಕೇಳಿದರು.
ಯಾವುದೇ ರೀತಿಯ ಸ್ಥಿರವಾದ ಕೆಲಸವನ್ನು ಹುಡುಕುತ್ತಿರುವುದಾಗಿ ಅತ್ಯಂತ ವಿನಮ್ರವಾಗಿ ಹೇಳಿಕೊಂಡರು. ಕೇವಲ ಬೈಕ್ ಟ್ಯಾಕ್ಸಿ ಓಡಿಸುವುದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ತಿಳಿಸಿದ ಆತ, 'ನನ್ನನ್ನು ನಿಮ್ಮ ಕಂಪನಿಯಲ್ಲೋ ಅಥವಾ ನಿಮಗೆ ತಿಳಿದಿರುವ ಬೇರೆ ಕಡೆಯೋ ರೆಫರ್ (Refer) ಮಾಡಬಹುದೇ?' ಎಂದು ಕೇಳಿದನು.
ಅವನ ಮಾತಿನಲ್ಲಿದ್ದ ಗಾಂಭೀರ್ಯವನ್ನು ಕಂಡು ಅವರ ವಿದ್ಯಾಭ್ಯಾಸದ ಬಗ್ಗೆ ಕೇಳಿದೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು ಗಣಿತಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಜೊತೆಗೆ ಬಿ.ಎಡ್. ಪಡೆದಿರುವುದಾಗಿ ತಿಳಿಸಿದರು. ಸರ್ಕಾರಿ ಬೋಧನಾ ಪರೀಕ್ಷೆಗಳಲ್ಲಿ ವಿಫಲ ಹೊಂದಿದ ನಂತರ ನಾನು ಜೀವನ ಸಾಗಿಸಲು ಈ ಕೆಸಲವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದರು.
ನಾವು ವಿದ್ಯಾರ್ಥಿಗಳಿಗೆ ಕಷ್ಟಪಟ್ಟು ಓದಿ, ಪದವಿ ಪಡೆಯಿರಿ. ಆಗ ಜೀವನ ಸ್ಥಿರವಾಗುತ್ತದೆ ಎಂದು ಹೇಳುತ್ತೇವೆ. ಆದರೆ, ಉದ್ಯೋಗ ಎಂಬುದೇ ಇಲ್ಲದಾಗ ಜೀವನ ಸ್ಥಿರವಾಗುವುದಾದರೂ ಹೇಗೆ ಎಂದು ಹೇಳಿದರು.
ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆಗಳು
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಸಾಮಾಜಿಕ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಬಳಕೆದಾರರ ಒಂದು ಭಾಗವು ಚಾಲಕನ ಹೋರಾಟದ ಬಗ್ಗೆ ತೀವ್ರ ಸಹಾನುಭೂತಿ ವ್ಯಕ್ತಪಡಿಸಿದ್ದು, "ಇಂದಿನ ಕಾಲದಲ್ಲಿ ಜೀವನ ನಿರ್ವಹಣೆ ಎಷ್ಟು ಕಷ್ಟವಾಗಿದೆ ಎಂಬುದಕ್ಕೆ ಈ ಯುವಕನೇ ಸಾಕ್ಷಿ. ಯಾವುದೇ ಕೆಲಸ ಸಣ್ಣದಲ್ಲ, ಅವನ ಪ್ರಾಮಾಣಿಕ ಪ್ರಯತ್ನಕ್ಕೆ ಮೆಚ್ಚುಗೆ ಇರಲಿ" ಎಂದು ಬೆಂಬಲ ಸೂಚಿಸಿದರು.
ಇನ್ನೊಬ್ಬ ಬಳಕೆದಾರರು ಜೀವನ ಅನ್ಯಾಯ. ಕಷ್ಟಪಟ್ಟು ಕೆಲಸ ಮಾಡುವುದರಿಂದ ಫಲಿತಾಂಶ ಸಿಗುತ್ತದೆ ಎಂಬ ನಿರಂತರ ಸುಳ್ಳನ್ನು ನಮಗೆ ನೀಡಲಾಗುತ್ತಿದೆ ಎಂದು ಬರೆದಿದ್ದಾರೆ (ಏಜೆನ್ಸೀಸ್).