ಮನೆಗೆ ಮರಳಿದ ಗಿರ್ಧಾರಿ ಸಿಂಗ್, ಜೈಲಿನಿಂದ ಬಿಡುಗಡೆಯಾದ ಬಳಿಕ ಪಂಜಾಬ್‌ನ ಬಿಯಾಸ್ ನದಿ ಸಮೀಪದ ಸತ್ಸಂಗಕ್ಕೆ ಹೋಗಿದ್ದೆ ಎಂದು ಹೇಳಿದ್ದಾರೆ. "ನಾನು ಬೇಸರದಲ್ಲಿದ್ದ ಕಾರಣ ಕುಟುಂಬದವರನ್ನು ಸಂಪರ್ಕಿಸಿರಲಿಲ್ಲ," ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ಕೊಲೆ ಪ್ರಕರಣವನ್ನು ದಾಖಲಿಸಿದ್ದ ಪೊಲೀಸರು ಈಗ ತನಿಖೆಯ ದಿಕ್ಕನ್ನೇ ಬದಲಿಸಿದ್ದು, ಅಂತ್ಯಸಂಸ್ಕಾರ ಮಾಡಲಾದ ಶವ ಯಾರದ್ದು ಎಂಬುದನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.