ವೈರಲ್ ಆಗಿರುವ ವೀಡಿಯೊದಲ್ಲಿ, ಪ್ಲಾಟ್‌ಫಾರ್ಮ್‌ನಿಂದ ರೈಲು ಹೊರಡಲು ಆರಂಭಿಸಿ ವೇಗವನ್ನು ಪಡೆದುಕೊಳ್ಳುತ್ತಿರುವುದು ಕಂಡುಬರುತ್ತದೆ. ಇದೇ ವೇಳೆ ಓಡುತ್ತಾ ಬಂದ ಯುವಕನೊಬ್ಬ ಸಾಹಸ ಮಾಡಲು ಹೋಗಿ ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುತ್ತಾನೆ. ಆದರೆ, ದುರದೃಷ್ಟವಶಾತ್ ಆತನ ಹಿಡಿತ ತಪ್ಪಿ ಸಮತೋಲನ ಕಳೆದುಕೊಳ್ಳುತ್ತಾನೆ. ಮುಂದಿನ ಕೆಲವೇ ಸೆಕೆಂಡುಗಳಲ್ಲಿ ಆತ ನೇರವಾಗಿ ಚಲಿಸುವ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಕಿರಿದಾದ ಗ್ಯಾಪ್‌ಗೆ ಜಾರಿ ಬೀಳುತ್ತಾನೆ.