ವಿಡಿಯೋದಲ್ಲಿ, ವೈಭವ್ ಅವರು ಸ್ನೇಹಿತರೊಂದಿಗೆ ಮಾತನಾಡುತ್ತಾ ಕುಳಿತಿರುತ್ತಾರೆ. ಈ ವೇಳೆ ಹಿಂದಿನಿಂದ ಟಿ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿ, ಮುಖ ಕಾಣದಂತೆ ಸ್ಕಾರ್ಫ್ ಹಾಕಿಕೊಂಡು ಬರುವ ಗುಜರ್, ವೈಭವ್ ಪಕ್ಕದಲ್ಲೇ ಕೂರುತ್ತಾರೆ. ಮಾತನಾಡುತ್ತಲೇ ಪಕ್ಕದಲ್ಲಿ ನೋಡುವ ವೈಭವ್, ಯಾರೋ ಅಪರಿಚಿತರು ಎಂದು ಭಾವಿಸುತ್ತಾರೆ. ಎರಡು ಬಾರಿ ನೋಡುತ್ತಾರೆ. ಆದರೆ, ಮೂರನೇ ಬಾರಿ ನೋಡಿದಾಗ ಗುಜರ್ ಅವರು ತಮ್ಮ ಸ್ಕಾರ್ಫ್ ಅನ್ನು ತೆಗೆಯುತ್ತಾರೆ. ತನ್ನ ಸ್ನೇಹಿತ ಎಂದು ಗೊತ್ತಾದ ಕೂಡಲೇ ವೈಭವ್ ತುಂಬಾ ಉತ್ಸಾಹದಿಂದ ಎದ್ದು ಓಡಿ ಹೋಗಿ ತಮ್ಮ ಸ್ನೇಹಿತನನ್ನು ತಬ್ಬಿಕೊಳ್ಳುತ್ತಾರೆ.