Mumbai ಟ್ರೈನ್​ನಲ್ಲಿ ಸೀಟಿಗಾಗಿ ಜಗಳ, ಮಹಿಳೆಗೆ ನಿಂದಿಸಿ, ಬೆಲ್ಟ್​ನಿಂದ ಹಲ್ಲೆ ನಡೆಸಿದ ವ್ಯಕ್ತಿ; ರೈಲ್ವೆ ಪೊಲೀಸರಿಂದ ಅರೆಸ್ಟ್

Man Takes Out Belt, Assaults Woman Over Seat On Mumbai Local Train
Man Takes Out Belt, Assaults Woman Over Seat On Mumbai Local Train
Published on

ಪ್ರಮುಖ ಮುಖ್ಯಾಂಶಗಳು

  • ಮುಂಬೈ ಉಪನಗರ ರೈಲ್ವೆ ಹಾರ್ಬರ್ ಲೈನ್ ಟ್ರೈನ್​ನಲ್ಲಿ ಸೀಟಿಗಾಗಿ ಮಹಿಳೆ-ವ್ಯಕ್ತಿ ಮಧ್ಯೆ ಜಗಳ.
  • ಪ್ಯಾಂಟ್​ನಿಂದ ಬೆಲ್ಟ್​ ತೆಗೆದು ಮಹಿಳೆ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ, ಅರೆಸ್ಟ್.
  • 36 ವರ್ಷದ ಮೊಹಮ್ಮದ್ ರಿಜ್ವಾನ್ ಅನ್ಸಾರಿ ಎಂಬಾತನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು.
ಮುಂಬೈ: ಇಲ್ಲಿನ ಲೋಕಲ್​ ರೈಲೊಂದರಲ್ಲಿ ವ್ಯಕ್ತಿಯೊಬ್ಬ ಎಲ್ಲರೆದುರು ಮಹಿಳೆಯೊಬ್ಬರಿಗೆ ನಿಂದಿಸಿ, ಬೆಲ್ಟ್​ ತೆಗೆದು ಹಲ್ಲೆ ಮಾಡಿದ ಘಟನೆಯ ದೃಶ್ಯಾವಳಿ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಆ ಬೆನ್ನಲ್ಲೇ ಎಚ್ಚೆತ್ತ ಮುಂಬೈನ ಅಂಧೇರಿ ಸರ್ಕಾರಿ ರೈಲ್ವೆ ಪೊಲೀಸರು ವ್ಯಕ್ತಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಆಗಸ್ಟ್​.5 ಬುಧವಾರ ಸುಮಾರು 5:30ಕ್ಕೆ ಮುಂಬೈ ಉಪನಗರ ರೈಲ್ವೆಯ ಹಾರ್ಬರ್ ಲೈನ್ ರೈಲಿನಲ್ಲಿ ಈಘಟನೆ ನಡೆದಿದೆ ಎನ್ನಲಾಗಿದೆ. 36 ವರ್ಷದ ಮೊಹಮ್ಮದ್ ರಿಜ್ವಾನ್ ಅನ್ಸಾರಿ ಬಂಧಿತ ಎಂದು ಮುಂಬೈನ ಅಂಧೇರಿ ಸರ್ಕಾರಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಏನಿದು ಘಟನೆ?

36 ವರ್ಷದ ಮೊಹಮ್ಮದ್ ರಿಜ್ವಾನ್ ಅನ್ಸಾರಿ ಮತ್ತು ಮಹಿಳೆ ಮಧ್ಯೆ ಶುರುವಾಗಿದ್ದ ವಾಗ್ವಾದಕ್ಕೆ ಕಾರಣ ಏನು ಎನ್ನುವುದರ ಬಗ್ಗೆ ತೀವ್ರ ವಿಚಾರಣೆ ನಡೆಸಿದ ಪೊಲೀಸರಿಗೆ ಸಿಕ್ಕ ಮಾಹಿತಿ ಹೀಗಿದೆ. ವಿಡಿಯೋದಲ್ಲಿ ಕಾಣುವಂತೆ ಮಹಿಳೆ ಕುಳಿತಿದ್ದ ಆಸನಕ್ಕಾಗಿ ಈ ಗಲಾಟೆ ಶುರುವಾಗಿದೆ. ಇಬ್ಬರ ನಡುವೆ ವಾಗ್ವಾದ ಹೆಚ್ಚಾಗಿ, ಮಾತಿಗೆ ಮಾತು ಬೆಳೆದಿದೆ. ಜೋರಾಗಿ ಮಾತನಾಡಬೇಡಿ ಎಂದು ಮಹಿಳೆ ತಾಕೀತು ಮಾಡುತ್ತಾಳೆ.

ಇದರಿಂದ ತೀವ್ರ ಸಿಟ್ಟಾದ ಅನ್ಸಾರಿ ಪ್ಯಾಂಟ್​ನಿಂದ ಬೆಲ್ಟ್​ ತೆಗೆದು ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ. ಇಷ್ಟೇ ಅಲ್ಲದೆ ಅವಹೇಳನಾಕಾರಿ ಮಾತುಗಳಿಂದ ನಿಂದಿಸಿದ್ದಾನೆ ಎಂದು ಅಂಧೇರಿ ಸರ್ಕಾರಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ವೈರಲ್

ಇಬ್ಬರ ಈ ಗಲಾಟೆ ವಿಡಿಯೋವನ್ನು ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬನು ಸೆರೆ ಹಿಡಿದು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದ. ಇದು ವೈರಲ್ ಆದ ಕಾರಣ ಅಂಧೇರಿ ಸರ್ಕಾರಿ ರೈಲ್ವೆ ಪೊಲೀಸರು (GRP) ಗಮನಕ್ಕೂ ಬಂದು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದರು. ಕೊನೆಗೆ ಆತನನ್ನು

ವಡಾಲಾದಿಂದ ಆತನನ್ನು ವಶಕ್ಕೆ ಪಡೆದುಕೊಳ್ಳಲಾಯ್ತು

ಎನ್ನಲಾಗಿದೆ.

ಕೇಸ್​ ದಾಖಲು

ಸದ್ಯ ಮೊಹಮ್ಮದ್ ರಿಜ್ವಾನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ(ಬಿಎನ್​ಎಸ್​​) ಸೆಕ್ಷನ್ 74 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆ ಮಹಿಳೆಯರ ಗೌರವಕ್ಕೆ ಅಥವಾ ನೈತಿಕತೆಗೆ ಧಕ್ಕೆ ತರುವ ಉದ್ದೇಶದಿಂದ ಅವರ ಮೇಲೆ ಹಲ್ಲೆ ಅಥವಾ ಕ್ರಿಮಿನಲ್​​ ಬಲವನ್ನು ತೋರಿಸುತ್ತದೆ.
ನೆಟ್ಟಿಗರು ಏನಂದ್ರು?
ರೈಲಿನಲ್ಲಿದ್ದವರು ಇದನ್ನು ನೋಡಿಯೂ ಸುಮ್ಮನಿದ್ದಾರೆ. ಮಹಿಳೆಯ ಸಹಾಯಕ್ಕೆ ಯಾರು ಮುಂದಾಗದೆ ಇರುವುದು ನಿಜಕ್ಕೂ ದುಸ್ಥಿತಿ. ದೇಶ ಎತ್ತ ಸಾಗುತ್ತಿದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಅಂಕಿತ್​ ಪಾಂಡೆ ಎನ್ನುವವರು ಕಾಮೆಂಟ್ ಮಾಡಿದ್ದು,ಈ ಜನರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ, ಅವರಿಗೆ ಚಿಕಿತ್ಸೆ ಬೇಕು, ಅವರು ತಮ್ಮ ಮನೆಗಳಲ್ಲಿಯೂ ಹೀಗೆಯೇ ವರ್ತಿಸುತ್ತಾರೆ ಎಂದು ಹೇಳಿದ್ದಾರೆ,

(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net