ದೆಹಲಿ ಮೂಲದ ಅರ್ನಬ್ ಎಂಬ ಹೆಸರಿನ ಯುವಕ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದ ಆರಂಭದಲ್ಲಿ ಅಜ್ಜಿ ವಿಮಾನ ನಿಲ್ದಾಣದಲ್ಲಿ ಮೊಮ್ಮಗನಿಗಿಂತ ಮುಂದೆ ಹೆಜ್ಜೆ ಹಾಕುತ್ತಿರುವುದನ್ನು ಕಾಣಬಹುದು. ಈ ದೃಶ್ಯದ ಮೇಲೆ, "ನನ್ನ ಕನಸು ನನಸಾಗಲು 22 ವರ್ಷ ತಗುಲಿತು, ಆದರೆ ಆಕೆಯ ಮೊದಲ ವಿಮಾನ ಪ್ರಯಾಣಕ್ಕೆ 84 ವರ್ಷ ಬೇಕಾಯಿತು" ಎಂಬ ಭಾವುಕ ಸಾಲುಗಳನ್ನು ಬರೆಯಲಾಗಿದೆ.