ದೇವರ ಪೂಜೆಗೆ ಹೂ ಕೀಳುವಾಗ ನಡೆದ ದುರಂತ; 23ನೇ ಮಹಡಿಯಿಂದ ಕಾಲು ಜಾರಿ ಬಿದ್ದು ತಂದೆ-ಮಗ ಸಾವು..Uttar Pradesh

ದೇವರ ಪೂಜೆಗೆ ಹೂ ಕೀಳುವಾಗ ನಡೆದ ದುರಂತ; 23ನೇ ಮಹಡಿಯಿಂದ ಕಾಲು ಜಾರಿ ಬಿದ್ದು ತಂದೆ-ಮಗ ಸಾವು..Uttar Pradesh
Published on: 
  • ದೇವರಿಗೆ ಪೂಜೆಗೆ ಹೂ ಕೀಳಲು ಹೋಗಿ ಮಸಣ ಸೇರಿದ ತಂದೆ-ಮಗ.

  • ಬಾಲ್ಕನಿಯಲ್ಲಿ ಹೂ ಕೀಳುವಾಗ ಕಾಲು ಜಾರಿ ಬಿದ್ದ 11 ವರ್ಷದ ಬಾಲಕ.

  • ಮಗನ್ನು ಕಾಪಾಡಲು ಹೋದ ತಂದೆ, ಸಮತೋಲನ ತಪ್ಪಿ ಕೆಳಕ್ಕೆ ಬಿದ್ದು ಸಾವು.

  • ಉತ್ತರ ಪ್ರದೇಶದ ಗೌತಮ ಬುದ್ಧ ಜಿಲ್ಲೆಯಲ್ಲಿ ನಡೆದ ಘಟನೆ.

ನೋಯ್ಡಾ: ಉತ್ತರ ಪ್ರದೇಶದ ಗೌತಮ ಬುದ್ಧ ಜಿಲ್ಲೆಯ ಗ್ರೇಟರ್​ ನೋಯ್ಡಾದಲ್ಲಿರುವ ಮಹಾಗುನ್​ ಮೈವುಡ್​ ಸೊಸೈಟಿಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ದೇವರ ಪೂಜೆಗೆ ಹೂ ಕೀಳುತ್ತಿದ್ದಾಗ ಬಾಲಕನೊಬ್ಬ 23ನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದು, ಆತನನ್ನು ಉಳಿಸಲು ಹೋದ ತಂದೆಯೂ ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಅಮಲ್​ ಕುಮಾರ್​ ಪಾತ್ರ (40), ರಣದೀಪ್​​ ಪಾತ್ರ (11) ಮೃತರು ಎಂದು ಗುರುತಿಸಲಾಗಿದೆ.

ಪೊಲೀಸರಿಗೆ ಸಿಕ್ಕ ಪ್ರಾಥಮಿಕ ಮಾಹಿತಿ ಪ್ರಕಾರ, ಅಮಲ್​ ಕುಮಾರ್ ಅವರ ಪುತ್ರರಾದ ರಣದೀಪ್ ಮತ್ತು ಆರವ್​ ಇಬ್ಬರು ಬೆಳಿಗ್ಗೆ ಪೂಜೆಗಾಗಿ ಹೂ ಕೀಳಲು ಬಾಲ್ಕನಿಗೆ ತೆರಳಿದ್ದರು. ಹೂ ಕೀಳುವ ವೇಳೆ ಬಾಲಕ ಕಾಲು ಜಾರಿ ಬಾಲ್ಕನಿಯಿಂದ ಕೆಳಗಿ ಬಿದ್ದ, ಅವನನ್ನು ಬದುಕಿಸಲು ಹೋದ ತಂದೆ ಸಹ 23ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ​​​​​https://x.com/GoldySrivastav/status/2116054051016057186?a=-QMan03jgmHibtGkFmQ&s=20

Also Read
ನೊಯ್ಡಾ ಸೂಪರ್‌ನೋವಾದಲ್ಲಿ ದುರಂತ; 43ನೇ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು | Noida Supernova Death
ದೇವರ ಪೂಜೆಗೆ ಹೂ ಕೀಳುವಾಗ ನಡೆದ ದುರಂತ; 23ನೇ ಮಹಡಿಯಿಂದ ಕಾಲು ಜಾರಿ ಬಿದ್ದು ತಂದೆ-ಮಗ ಸಾವು..Uttar Pradesh

ಕಮಿಷನರ್ ಏನಂದ್ರು?

ಗೌತಮ ಬುದ್ಧ ನಗರದ ಪೊಲೀಸ್ ಕಮಿಷನರ್​ ಮಾತನಾಡಿ, 'ಮಹಾಗುಣ್ ಮೈ ವುಡ್ಸ್​​ ಸೊಸೈಟಿಯ 23ನೇ ಮಹಡಿಯಿಂದ ಇಬ್ಬರು ಬಿದ್ದು ಮೃತಪಟ್ಟ ಘಟನೆ ನಮಗೆ ಆರ್‌ವಿ) ಮೂಲಕ ಬಿಸ್ರಾಖ್ ಪೊಲೀಸ್ ಠಾಣೆಗೆ ಮಾಹಿತಿ ಸಿಕ್ಕಿತು. ತಕ್ಷಣವೇ ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿತ್ತು. ಇಬ್ಬರು ತೀವ್ರವಾವಗಿ ಗಾಯಗೊಂಡಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದೆವು. ಆದರೆ, ವೈದ್ಯರು ಈಗಾಗಲೇ ಮೃತಪಟ್ಟಿದ್ದಾರೆ' ಎಂದು ಘೋಷಿಸುವುದರು ಎನ್ನುವುದನ್ನು ಹಂಚಿಕೊಂಡರು.

ಪತ್ನಿ ಹೇಳಿದ್ದಿಷ್ಟು

'ಶುಕ್ರವಾರ ಬೆಳಿಗ್ಗೆ ಖಾತು ಶ್ಯಾಮ್​ ದೇವಸ್ಥಾನಕ್ಕೆ ಭೇಟಿ ನೀಡಬೇಕಿತ್ತು. ಹೀಗಾಗಿ ಮನೆಯಲ್ಲಿನ ದೇವರಿಗೆ ಬೆಳಗ್ಗಿನ ಪೂಜೆ ಮಾಡಲು ಹೂ ಸಂಗ್ರಹಿಸಲು ಪತಿ ಮತ್ತು ಮಗ ತೆರಳಿದ್ದರು. ಬಾಲ್ಕನಿಯಲ್ಲಿ ಹೂ ಕೀಳುವಾಗ ಮೊದಲು ಮಗ ಜಾರಿ ಬಿದ್ದ. ನೇತಾಡುತ್ತಿದ್ದ ಆತನನ್ನು ರಕ್ಷಿಸಲೆಂದು ಪತಿ ಕೆಳಕ್ಕೆ ಇಳಿದರು. ಆದರೆ, ಅಲ್ಲಿ ಸಮತೋಲನ ಕಳೆದುಕೊಂಡು ಇಬ್ಬರು ಬಿದ್ದಿದ್ದಾರೆ ಎಂದು ಮೃತ ಅಮಲ್​ ಕುಮಾರ್ ಪತ್ನಿ ಹೇಳಿದರು.

ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿವರವಾದ ತನಿಖೆ ನಡೆಸಿದ ನಂತರ ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದುಬರಲಿದೆ ಎಂದು ಹೇಳಿದರು, (ಏಜೆನ್ಸೀಸ್).