ಕಳೆದ 24 ಗಂಟೆಗಳಲ್ಲಿ ವಯನಾಡು ಭಾಗದಲ್ಲಿ ಬರೋಬ್ಬರಿ 256 ಮಿಲಿಮೀಟರ್ ಭಾರಿ ಮಳೆ ದಾಖಲಾಗಿದ್ದು, ಮಳೆಯ ರಭಸಕ್ಕೆ ಸೇತುವೆಯ ಬಳಿ ರಾಶಿ ಹಾಕಲಾಗಿದ್ದ ಬೃಹತ್ ಮಣ್ಣಿನ ದಿಣ್ಣೆ ದಿಢೀರನೆ ಕುಸಿದು ಬಿದ್ದಿದೆ. ಮಣ್ಣು ಕುಸಿಯುವ ಭೀಕರ ದೃಶ್ಯವು ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ಜೊತೆಗೆ ಮರಗಳು ಮತ್ತು ಬ್ಯಾರಿಕೇಡ್‌ಗಳು ಕೊಚ್ಚಿ ಹೋಗಿರುವುದು ಕಂಡುಬಂದಿದೆ. ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಎರಡು ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಮಣ್ಣಿನ ಅಡಿಯಲ್ಲಿ ಯಾರಾದರೂ ಸಿಲುಕಿದ್ದಾರೆಯೇ ಎಂದು ಪರಿಶೀಲಿಸುತ್ತಿವೆ.