ಪತ್ನಿ ಅನಿತಾ ಅವರ ಮೊಬೈಲ್‌ನಲ್ಲಿ ಇತರೆ ನಂಬರ್‌ಗಳು ಇರುವುದನ್ನು ಕಂಡಿದ್ದ ಸುನಿಲ್, ಆಕೆಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ, ಮನೆಯಲ್ಲಿ ಜಗಳ ಆಡುತ್ತಿದ್ದ. ಸೋಮವಾರ ಸಂಜೆಯೂ ಇದೇ ವಿಚಾರಕ್ಕೆ ದಂಪತಿ ನಡುವೆ ಮಾತಿನ ಜಟಾಪಟಿ ನಡೆದಿದೆ. ಪತ್ನಿ ಹಾಗೂ ಮಕ್ಕಳನ್ನು ಕೆರೆಯ ಬಳಿ ಎಳೆದೊಯ್ದ ಸುನಿಲ್, ಅಲ್ಲಿ ಅನಿತಾಳ ಸೀರೆಯ ಸೆರಗಿನಿಂದಲೇ ಕುತ್ತಿಗೆ ಬಿಗಿದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ಮಗಳನ್ನು ನೀರಿನಲ್ಲಿ ಮುಳುಗಿಸಿ, ಕೊನೆಗೆ ಮಗನನ್ನೂ ಕೆರೆಗೆ ನೂಕಿದ್ದಾನೆ ಎಂದು ವರದಿಯಾಗಿದೆ.