ನಾಯಿಮರಿ ಹಿಡಿದು ಮದ್ಯ ಕುಡಿಸಿದ ವ್ಯಕ್ತಿ! ಕೂಡಲೇ ಇವನನ್ನು ಬಂಧಿಸಿ ಅಂದ ನೆಟ್ಟಿಗರು..dog
dog
Published on:
Copied
Follow Us
ನವದೆಹಲಿ: ( dog) ಮಾನವೀಯತೆ ಮರೆತ ವ್ಯಕ್ತಿಯೊಬ್ಬ ರಸ್ತೆಯ ಬದಿಯಲ್ಲಿದ್ದ ಪುಟ್ಟ ನಾಯಿಮರಿಗೆ ಬಲವಂತವಾಗಿ ಮದ್ಯ ಕುಡಿಸಿರುವ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ನೆಟ್ಟಿಗರು ಆ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?:
ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಿಂತು ಪುಟ್ಟ ನಾಯಿಮರಿಯ ಬಾಯಿಯನ್ನು ಬಲವಂತವಾಗಿ ತೆರೆದು, ಕ್ಯಾನ್‌ನಲ್ಲಿದ್ದ ಮದ್ಯವನ್ನು ಕುಡಿಸುತ್ತಿರುವುದು ಕಂಡುಬಂದಿದೆ. ನಾಯಿಮರಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಹ, ಆ ವ್ಯಕ್ತಿ ಅದನ್ನು ಬಿಡದೆ ಹಿಂಸಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋವನ್ನು ಎಕ್ಸ್ (X) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಸಾವಿರಾರು ಜನರು, ಸ್ಥಳೀಯ ಪೊಲೀಸರನ್ನು ಟ್ಯಾಗ್ ಮಾಡಿ ಈ ಕೂಡಲೇ ಆತನನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.ಪ್ರಾಣಿ ಸಂರಕ್ಷಣಾ ಕಾನೂನುಗಳನ್ನು ಜಾರಿಗೊಳಿಸಲು ಮತ್ತು ಪ್ರಾಣಿಗಳ ನೈತಿಕ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಸಾರ್ವಜನಿಕ ಜಾಗೃತಿ ಮೂಡಿಸಲು ಮನವಿ ಮಾಡಿದರು.
ನಾಯಿಗಳಿಗೆ ಆಲ್ಕೋಹಾಲ್ ನೀಡುವುದು ಅವುಗಳ ಜೀವಕ್ಕೆ ಅಪಾಯಕಾರಿ. ಇದರಿಂದ ಪ್ರಾಣಿಗಳ ಲಿವರ್ ಮತ್ತು ನರಮಂಡಲದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯರು ಎಚ್ಚರಿಸಿದ್ದಾರೆ.
ಕಾನೂನು ಏನು ಹೇಳುತ್ತದೆ?
ಭಾರತೀಯ ದಂಡ ಸಂಹಿತೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ (PCA Act) ಅಡಿಯಲ್ಲಿ ಪ್ರಾಣಿಗಳಿಗೆ ವಿಷ ನೀಡುವುದು ಅಥವಾ ಹಾನಿಕಾರಕ ದ್ರವಗಳನ್ನು ಕುಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಕೃತ್ಯ ಎಸಗಿದ ವ್ಯಕ್ತಿಗೆ ದಂಡ ಮತ್ತು ಜೈಲು ಶಿಕ್ಷೆ ಎರಡನ್ನೂ ವಿಧಿಸಲು ಅವಕಾಶವಿದೆ.