ಮೊಹಬತ್ ನು ಹೋ ತೇರಾ ನಾಲ್ ಜೋ ಕರ್ದೆ ಆನ್ (ನಿನಗೆ ನನ್ನ ಮೇಲಿರುವ ಪ್ರೀತಿಯನ್ನು ಒಪ್ಪಿಕೊಳ್ಳುತ್ತಿದ್ದೇನೆ). ಆಪ್ ಮಾನೋ ಯಾ ಮತ್ ಮಾನೋ ಲೇಕಿನ್ ಆಪ್ಕ ದಿಲ್ ನಹಿ ಲಗ್ತಾ ಯಾರ್ (ನೀವು ನಂಬುತ್ತೀರೋ ಇಲ್ಲವೋ ನಿಮ್ಮ ಮನಸ್ಸು ನೆಮ್ಮದಿಯಾಗಿಲ್ಲ ಗೆಳೆಯಾ ) ಎಂದು ಹಾಳೆಯಲ್ಲಿ ಬರೆಯಲಾಗಿದೆ. ಇದಷ್ಟೇ ಅಲ್ಲದೆ, ಕಿಟ್ಕ್ಯಾಟ್, ಹರ್ಷೀಸ್ ಸೇರಿದಂತೆ ನಾನಾ ರೀತಿಯ ಚಾಕೋಲೇಟ್ ಪೇಪರ್ ಅಂಟಿಸಿದ್ದಾರೆ. ಅದರಲ್ಲಿ ಪ್ರಣಯಗೀತೆ, ಕವನ, ಪದ್ಯ ಬರೆಯಲಾಗಿದೆ. ಇದು ಒಬ್ಬ ಯುವತಿ ತನ್ನ ಗೆಳೆಯನಿಗಾಗಿ ಬರೆದಿದ್ದಾರೆ. ಸಾಕಷ್ಟು ಶ್ರಮ ವಹಿಸಿದ್ದಾಳೆ ಎಂದು ಇನ್ಸ್ಟಾಗ್ರಾಮ್ ಬಳಕೆದಾರ ಆದಿತ್ಯ ಹೇಳಿದ್ದಾರೆ.