ಯಾವುದೇ ಶಿಕ್ಷಣವಿಲ್ಲದ ಬುಡಕಟ್ಟು ಜನಾಂಗದ ವ್ಯಕ್ತಿಯಾಗಿದ್ದ ಜಿತು ಅವರ ಬಳಿ ಯಾವುದೇ ಮರಣ ಪ್ರಮಾಣಪತ್ರ ಅಥವಾ ಉತ್ತರಾಧಿಕಾರ ಪತ್ರಗಳು ಇರಲಿಲ್ಲ. ಮ್ಯಾನೇಜರ್ ಹೇಳಿದ ಮಾತನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಅಸಹಾಯಕರಾಗಿ ಹಿಂತಿರುಗಿದರು. ಇದಾದ ಬಳಿಕ, ಸೋಮವಾರ (ಏಪ್ರಿಲ್ 27) ತಮ್ಮ ಹಳ್ಳಿಯ ಸ್ಮಶಾನಕ್ಕೆ ಹೋದ ಜಿತು, ತನ್ನ ಸಹೋದರಿಯ ಸಮಾಧಿಯನ್ನು ಅಗೆದು, ಆಕೆಯ ಅಸ್ಥಿಪಂಜರವನ್ನು ಬಟ್ಟೆಯಲ್ಲಿ ಸುತ್ತಿ, ಉರಿಯುವ ಬಿಸಿಲಿನಲ್ಲಿ ಸುಮಾರು 3 ಕಿ.ಮೀ ನಡೆದುಕೊಂಡು ಬ್ಯಾಂಕ್‌ಗೆ ಹೋದನು.