ಬಾಯ್ಗಿಟ್ಟ ಕೂಡಲೇ ಸ್ಫೋಟಗೊಂಡ ರಸಗುಲ್ಲ! ಸ್ವೀಟ್​ ರೂಪದಲ್ಲಿದ್ದ ನಾಡಬಾಂಬ್​ ತಿಂದು ವ್ಯಕ್ತಿ ನಿಂತಲ್ಲೇ ದುರ್ಮರಣ | Pig Killer Bomb

Homemade Bomb
ಬಾಯ್ಗಿಟ್ಟ ಕೂಡಲೇ ಸ್ಫೋಟಗೊಂಡ ರಸಗುಲ್ಲ! ಸ್ವೀಟ್​ ರೂಪದಲ್ಲಿದ್ದ ನಾಡಬಾಂಬ್​ ತಿಂದು ವ್ಯಕ್ತಿ ನಿಂತಲ್ಲೇ ದುರ್ಮರಣ | Homemade Bomb ಎಐ ರಚಿತ ಚಿತ್ರ
Published on: 

ಮಧ್ಯಪ್ರದೇಶ: ಸಿಹಿಯಾದ, ರುಚಿಕರವಾದ ರಸಗುಲ್ಲ ಎಂದು ಭಾವಿಸಿ ಬಾಯಿಗೆ ಹಾಕಿಕೊಂಡಿದ್ದೇ ತಡ ವ್ಯಕ್ತಿಯೊಬ್ಬರು ನಿಂತಲ್ಲೇ ಸ್ಫೋಟಗೊಂಡು ಸಾವನ್ನಪ್ಪಿದ ದಾರುಳ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ.

ತಮ್ಮ ಕುಟುಂಬಕ್ಕೆ ಪರಿಚಯಸ್ಥನೊಬ್ಬ ನೀಡಿದ ವಸ್ತುವನ್ನು ರಸಗುಲ್ಲ ಎಂಬ ಸಿಹಿ ತಿನಿಸು ಎಂದು ನಂಬಿ ಬಾಯಿಗೆ ಹಾಕಿಕೊಂಡ ವ್ಯಕ್ತಿ ಕ್ಷಣಾರ್ಧದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಸದ್ಯ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸ್ವೀಟ್​ ಹೆಸರಿನಲ್ಲಿ ನಾಡ​ಬಾಂಬ್​ ಕೊಟ್ಟಿದ್ದಾರು? ಕೊಡುವ ದ್ವೇಷವಾದರೂ ಏನಿತ್ತು? ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೃತರನ್ನು ರಾಜೇಂದ್ರ ಬರೋಟಿಯಾ ಎಂದು ಗುರುತಿಸಲಾಗಿದೆ. ರಾಜೇಂದ್ರ ಅವರು ಮನೆಯಲ್ಲಿದ್ದಾಗ ಅಲ್ಲಿಗೆ ಬಂದ ರಾಮ್ ಭಗತ್ ಬರೋಟಿಯಾ ಎಂಬಾತನೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ರಾಮ್ ಭಗತ್ ಮನೆಯಲ್ಲೇ ತಯಾರಿಸಿದ ಸ್ಫೋಟಕವನ್ನು ರಾಜೇಂದ್ರ ಅವರಿಗೆ ನೀಡಿ, ಅದು ರಸಗುಲ್ಲಾ ಎಂದು ನಂಬಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಸಿಹಿ ಅಲ್ಲವೇ ಎಂದು ಬಾಯಿಗೆ ಹಾಕಿಕೊಂಡ ತಕ್ಷಣ ಸ್ವೀಟ್​ ರೂಪದಲ್ಲಿದ್ದ ಬಾಂಬ್​ ಸ್ಫೋಟಗೊಂಡಿದೆ. ಈ ವೇಳೆ, ಗಂಭೀರವಾಗಿ ಗಾಯಗೊಂಡ ಅವರನ್ನು ಕುಟುಂಬಸ್ಥರು ಹಾಗೂ ನೆರೆಹೊರೆಯವರು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಅವರು ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ.

ಇದು ನಾಡ ಬಾಂಬ್​!

ವ್ಯಕ್ತಿ ತಿಂದ ಬಾಂಬ್ ಪ್ರಾಣಿಗಳನ್ನು ಕೊಲ್ಲಲು ಬಳಸುವ ಸ್ಫೋಟಕವಾಗಿತ್ತು ಎಂದು ರಾಜೇಂದ್ರ ಅವರ ಪತ್ನಿ ಸುಶೀಲಾ ಪೊಲೀಸರಿಗೆ ತಿಳಿಸಿದ್ದಾರೆ. ವಿಚಾರಣೆ ವೇಳೆ ರಾಮ್ ಭಗತ್, ತನಗೆ ಈ ವಸ್ತುವನ್ನು ಒಬ್ಬ ಬಾಲಕ ನೀಡಿದ್ದಾಗಿ ಹೇಳಿದ್ದಾನೆ. ಆ ಬಾಲಕನನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಘಟನೆಗೆ ವೈಯಕ್ತಿಕ ದ್ವೇಷವೇ ಕಾರಣವೇ ಅಥವಾ ಇದರ ಹಿಂದೆ ಬೇರೆ ಉದ್ದೇಶ ಏನಾದರೂ ಇತ್ತೇ ಎಂಬದನ್ನು ತಿಳಿಯಲು ಪೊಲೀಸರು ತನಿಖೆ ನಡೆಸು,(ಏಜೆನ್ಸೀಸ್).