ಕಾಡುಹಂದಿ ಕೊಲ್ಲುವ ಬಾಂಬ್‌ಗೆ ರಸಗುಲ್ಲಾ ರೂಪ: ತಿನ್ನಲು ಕೊಟ್ಟು ನೆರೆಮನೆಯವನ ಪ್ರಾಣ ತೆಗೆದ ಕಿರಾತಕ! rasagulla crime

ಸಿಹಿತಿಂಡಿ (ರಸಗುಲ್ಲಾ) ಎಂದು ನಂಬಿ ಬಾಯಿಗೆ ಹಾಕಿಕೊಂಡ ವಸ್ತುವೊಂದು ಕ್ಷಣಾರ್ಧದಲ್ಲೇ ಬಾಯೊಳಗೆ ಸ್ಫೋಟಗೊಂಡು 35 ವರ್ಷದ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿರುವ ಬೆಚ್ಚಿಬೀಳಿಸುವ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ನಡೆದಿದೆ. ಕಾಡುಹಂದಿಗಳನ್ನು ಕೊಲ್ಲಲು ಬಳಸುವ ಕಚ್ಚಾ ಸ್ಫೋಟಕವನ್ನು ರಸಗುಲ್ಲಾದಂತೆ ನೀಡಿದ್ದ ನೆರೆಮನೆಯ ಆರೋಪಿ ರಾಮಭಗತ್ ಬರೌಟಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೃತರನ್ನು ಪದಾರಿಯಾ ಛಾಂಟಾ ಗ್ರಾಮದ ನಿವಾಸಿ ರಾಜೇಂದ್ರ ಬರೌಟಿಯಾ (35) ಎಂದು ಗುರುತಿಸಲಾಗಿದೆ.rasagulla crime
ಕಾಡುಹಂದಿ ಕೊಲ್ಲುವ ಬಾಂಬ್‌ಗೆ ರಸಗುಲ್ಲಾ ರೂಪ
ಕಾಡುಹಂದಿ ಕೊಲ್ಲುವ ಬಾಂಬ್‌ಗೆ ರಸಗುಲ್ಲಾ ರೂಪAI image WEB
Published on: 

ಭೋಪಾಲ್: ಸಿಹಿತಿಂಡಿ (ರಸಗುಲ್ಲಾ) ಎಂದು ನಂಬಿ ಬಾಯಿಗೆ ಹಾಕಿಕೊಂಡ ವಸ್ತುವೊಂದು ಕ್ಷಣಾರ್ಧದಲ್ಲೇ ಬಾಯೊಳಗೆ ಸ್ಫೋಟಗೊಂಡು 35 ವರ್ಷದ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿರುವ ಬೆಚ್ಚಿಬೀಳಿಸುವ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ನಡೆದಿದೆ. ಕಾಡುಹಂದಿಗಳನ್ನು ಕೊಲ್ಲಲು ಬಳಸುವ ಕಚ್ಚಾ ಸ್ಫೋಟಕವನ್ನು ರಸಗುಲ್ಲಾದಂತೆ ನೀಡಿದ್ದ ನೆರೆಮನೆಯ ಆರೋಪಿ ರಾಮಭಗತ್ ಬರೌಟಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೃತರನ್ನು ಪದಾರಿಯಾ ಛಾಂಟಾ ಗ್ರಾಮದ ನಿವಾಸಿ ರಾಜೇಂದ್ರ ಬರೌಟಿಯಾ (35) ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ: ಬೆಂಕಿ ಕಾಯಿಸುತ್ತಿದ್ದಾಗ ನಡೆದ ದುರಂತ

ಮಂಗಳವಾರ ರಾತ್ರಿ 8 ಗಂಟೆಯ ಸುಮಾರಿಗೆ ರಾಜೇಂದ್ರ ಅವರು ಊಟ ಮುಗಿಸಿ, ತಮ್ಮ ಮನೆಯ ಅಂಗಳದಲ್ಲಿ ಕುಟುಂಬಸ್ಥರೊಂದಿಗೆ ಚಳಿಗೆ ಬೆಂಕಿ ಕಾಯಿಸುತ್ತಾ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಅದೇ ಗ್ರಾಮದ ರಾಮಭಗತ್, ಮಾತುಕತೆಯ ನಡುವೆ ರಸಗುಲ್ಲಾದಂತೆ ಕಾಣುತ್ತಿದ್ದ ವಸ್ತುವೊಂದನ್ನು ರಾಜೇಂದ್ರ ಅವರಿಗೆ ತಿನ್ನಲು ನೀಡಿದ್ದಾನೆ.

ನೆರೆಮನೆಯವನ ಮಾತನ್ನು ನಂಬಿ, ಅದು ಸಿಹಿತಿಂಡಿಯೇ ಇರಬೇಕೆಂದು ಭಾವಿಸಿದ ರಾಜೇಂದ್ರ ಯಾವುದೇ ಅನುಮಾನವಿಲ್ಲದೆ ಅದನ್ನು ಬಾಯಿಗೆ ಹಾಕಿಕೊಂಡು ಕಚ್ಚಿದ್ದಾರೆ. ಕಚ್ಚಿದ ಮರುಕ್ಷಣವೇ ಆ ವಸ್ತು ಭಾರಿ ಶಬ್ದದೊಂದಿಗೆ ಬಾಯೊಳಗೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ರಾಜೇಂದ್ರ ಅವರ ಬಾಯಿ ಮತ್ತು ದವಡೆ ಛಿದ್ರಗೊಂಡಿದ್ದು, ತೀವ್ರ ರಕ್ತಸ್ರಾವವಾಗಿದೆ. ಆತಂಕಗೊಂಡ ಕುಟುಂಬಸ್ಥರು ತಕ್ಷಣ ಅವರನ್ನು ಆಟೋರಿಕ್ಷಾದಲ್ಲಿ ದಿಂಡೋರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ : ತಾವರೆಕೆರೆ-ಕಾಳೇನ ಅಗ್ರಹಾರ ಪಿಂಕ್​ ಲೈನ್​ ಮಾರ್ಗಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ: 100 KM ಮೈಲಿಗಲ್ಲು ದಾಟಿದ ಬೆಂಗಳೂರು ಮೆಟ್ರೋ! PM Modi

ಸಿಹಿತಿಂಡಿಯಲ್ಲ, ಅದು ಕಾಡುಹಂದಿ ಕೊಲ್ಲುವ ನಾಡಬಾಂಬ್!

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಗೊಂಡ ವಸ್ತು ರಸಗುಲ್ಲಾ ಅಲ್ಲ, ಬದಲಿಗೆ ಗ್ರಾಮೀಣ ಭಾಗಗಳಲ್ಲಿ ಬೆಳೆ ನಾಶಪಡಿಸುವ ಕಾಡುಹಂದಿಗಳನ್ನು ಕೊಲ್ಲಲು ಬಳಸುವ ಅತ್ಯಂತ ಅಪಾಯಕಾರಿ ಕಚ್ಚಾ ಸ್ಫೋಟಕ (Crude Bomb) ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.

ಪೂರ್ವನಿಯೋಜಿತ ಕೊಲೆಯೇ? ಪೊಲೀಸರಿಂದ ತೀವ್ರ ವಿಚಾರಣೆ

ಆರೋಪಿ ರಾಮಭಗತ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 105 (ಕೊಲೆಗೆ ಸಮನಲ್ಲದ ಅಪರಾಧಿಕ ನರಹತ್ಯೆ) ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಬ್ಬರ ನಡುವೆ ಹಳೆಯ ವೈಷಮ್ಯವಿತ್ತೇ? ಆರೋಪಿ ಉದ್ದೇಶಪೂರ್ವಕವಾಗಿಯೇ ಕೊಲೆ ಮಾಡುವ ಸಂಚಿನೊಂದಿಗೆ ಸ್ಫೋಟಕಕ್ಕೆ ರಸಗುಲ್ಲಾ ರೂಪ ನೀಡಿ ತಂದಿದ್ದನೇ? ಅಥವಾ ಆತನಿಗೆ ಈ ಸ್ಫೋಟಕ ಎಲ್ಲಿಂದ ಸಿಕ್ಕಿತು? ಎಂಬ ಆಯಾಮಗಳಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಘಟನೆ ಗ್ರಾಮೀಣ ಪ್ರದೇಶಗಳಲ್ಲಿ ಕಚ್ಚಾ ಸ್ಫೋಟಕಗಳ ಅಕ್ರಮ ಬಳಕೆಯ ಭೀಕರತೆಯನ್ನು ಮತ್ತೊಮ್ಮೆ ತೆರೆದಿಟ್ಟಿದೆ, ( ಏಜೆನ್ಸೀಸ್​).