ಬ್ರ್ಯಾಂಡ್ ಅಂದ್ರೆ ಬಾಳಿಕೆ ಅಂದುಕೊಂಡ್ರಾ...? 14 ಸಾವಿರದ ಈ ಶೂ ಕಥೆ ಕೇಳಿದ್ರೆ ಬೆಚ್ಚಿಬೀಳ್ತೀರಾ! Birken stock Shoes

Birken stock Shoes (ಸಾಂದರ್ಭಿಕ ಚಿತ್ರ)
Birken stock Shoes (ಸಾಂದರ್ಭಿಕ ಚಿತ್ರ)
Published on
Birken stock Shoes: ಬ್ರ್ಯಾಂಡೆಡ್ ಉತ್ಪನ್ನಗಳು ಬಾಳಿಕೆಗೆ ಹೆಸರುವಾಸಿ ಎಂಬ ನಂಬಿಕೆಗೆ ಇತ್ತೀಚಿನ ಘಟನೆಯೊಂದು ಸವಾಲಾಗಿದೆ. ರಾಕೇಶ್ ದಯಾನಿ ಎಂಬ ವ್ಯಕ್ತಿ 14,000 ರೂ ನೀಡಿ ಖರೀದಿಸಿದ ಪ್ರೀಮಿಯಂ ಬರ್ಕೆನ್‌ಸ್ಟಾಕ್ ಶೂಗಳು ಕೇವಲ 10 ತಿಂಗಳಲ್ಲಿ ಹಾಳಾಗಿರುವ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

10 ತಿಂಗಳಲ್ಲಿ ಧೂಳು ಹಿಡಿದ ರೂ. 14,000 ಬಿರ್ಕೆನ್‌ಸ್ಟಾಕ್ ಶೂಗಳು

ರಾಕೇಶ್ ಅವರಿಗೆ ಶೂ ಬಗ್ಗೆ ಆಸಕ್ತಿ ಇದ್ದ ಕಾರಣ ಅವರು ದೆಹಲಿಯ ಡಿಎಲ್‌ಎಫ್ ಪ್ರೊಮೆನೇಡ್‌ನಲ್ಲಿರುವ ಬ್ರ್ಯಾಂಡ್‌ನ ಔಟ್‌ಲೆಟ್‌ನಲ್ಲಿ ಬಿರ್ಕೆನ್‌ಸ್ಟಾಕ್ ಶೂಗಳ ಮೇಲೆ ಹೂಡಿಕೆ ಮಾಡಲು ನಿರ್ಧರಿಸಿದರು. ಈ ಶೂಗಳ ಬೆಲೆ ಸರಿಸುಮಾರು 14000 ರೂ ಆಗಿದ್ದು, ಅವುಗಳನ್ನು ರಿಯಾಯಿತಿ ದರದಲ್ಲಿ 10,000 ಕ್ಕೆ ಪಡೆದುಕೊಂಡರು. 
ಆದಾಗ್ಯೂ, ಅವರು ಆರು ತಿಂಗಳ ನಂತರ ತಮ್ಮ ಶೂಗಳು ಹೊಲಿಗೆ ಬಿಟ್ಟಿರುವುದನ್ನು ಗಮನಿಸಿದರು. ಇದರಿಂದ ಕಂಗಾಲಾದ ಅವರು ದೂರು ನೀಡಲು ಔಟ್ಲೆಟ್​ಗೆ ಹೋದರು. ಆದರೆ, ಬ್ರಾಂಡ್​ ಇದಕ್ಕೆ ಮೂರು ತಿಂಗಳ ಗ್ಯಾರಂಟಿ ಇರುವುದರಿಂದ ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. 
ಯಾವುದೇ ಕ್ಷಮೆಯಾಚನೆ, ಭರವಸೆ ಮತ್ತು ಯಾವುದೇ ಪರಿಹಾರವಿಲ್ಲದೇ ವಾಪಾಸ್ಸು ಕಳುಹಿಸಿರುವುದಾಗಿ ರಾಕೇಶ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. 
ಅಂತಿಮವಾಗಿ ಬೇರೆ ದಾರಿ ಕಾಣದೆ, ರಾಕೇಶ್ ಆ ದುಬಾರಿ ಶೂಗಳನ್ನು ಒಬ್ಬ ಸ್ಥಳೀಯ ಚಮ್ಮಾರನ ಬಳಿಗೆ ಕೊಂಡೊಯ್ದರು. ಅವರು ಕೆಲವೇ ನಿಮಿಷಗಳಲ್ಲಿ ಅತ್ಯಂತ ಸುಲಭವಾಗಿ ದುರಸ್ತಿ ಮಾಡಿಕೊಟ್ಟರು. ಅಂದಿನಿಂದ ರಾಕೇಶ್ ಮತ್ತೆ ಆ ಶೂಗಳನ್ನು ಆರಾಮವಾಗಿ ಬಳಸಲು ಪ್ರಾರಂಭಿಸಿದರು.
ಆದರೆ, ನಾಲ್ಕು ತಿಂಗಳ ನಂತರ ಶೂಗಳ ಸುತ್ತಲೂ ಧೂಳು ಇರುವುದನ್ನು ಗಮನಿಸಿದ ರಾಕೇಶ್​ ಆ ಶೂಗಳ ಪಾದದ ಹಾಸಿಗೆಗಳು ಅಕ್ಷರಶಃ ಪುಡಿಯಾಗಿ ವಿಭಜನೆಯಾಗುತ್ತಿವೆ ಎಂಬುದನ್ನು ಅರಿತುಕೊಂಡರಿವುದಾಗಿ ಹಂಚಿಕೊಂಡಿದ್ದಾರೆ. 

ಬಿರ್ಕೆನ್‌ಸ್ಟಾಕ್‌ನ ಪ್ರತಿಕ್ರಿಯೆ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಬಿರ್ಕೆನ್‌ಸ್ಟಾಕ್ ಪ್ರತಿಕ್ರಿಯಿಸಿದ್ದು, ದಯವಿಟ್ಟು ನಿಮ್ಮ ಇನ್​ಬಾಕ್ಸ್​ ಪರಿಶೀಲಿಸಿ ಮತ್ತು ವಿನಂತಿಸಿದ ವಿವರಗಳನ್ನು ಹಂಚಿಕೊಳ್ಳಿ. ಇದರಿಂದ ನಿಮ್ಮ ಆದ್ಯತೆ ಮೇರೆಗೆ ಪರಿಶೀಲಿಸಬಹುದು ಎಂದು ಬರೆದಿದ್ದಾರೆ. ಒಬ್ಬ ಬಳಕೆದಾರರು ಭಾರತದಲ್ಲಿ ಕಡಿಮೆ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡುತ್ತಾರೆ ಎಂದು ಕಾಮೆಂಟ್​ ಮಾಡಿದ್ದಾರೆ (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net