ದೆಹಲಿ ಮೆಟ್ರೋ ಲಿಫ್ಟ್​ನಲ್ಲೇ ಮೂತ್ರ ವಿಸರ್ಜಿಸಿದ ವೃದ್ಧ; ವಿಡಿಯೋ ವೈರಲ್​ ಬೆನ್ನಲ್ಲೇ ಪೊಲೀಸರು ಹೇಳಿದ್ದಿಷ್ಟು..Delhi

Delhi Metro Lift
Delhi Metro Lift
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿ ಮೆಟ್ರೋ ನಿಲ್ದಾಣದ ಲಿಫ್ಟ್​ನಲ್ಲಿ ಮೂತ್ರ ವಿಸರ್ಜಿಸಿದ ವೃದ್ಧ
  • ಇನ್​ಸ್ಟಾಗ್ರಾಂನಲ್ಲಿ ವೃದ್ಧನ ನಡೆ ಬಗ್ಗೆ ವಿಡಿಯೋ ಹಂಚಿಕೊಂಡ ಮಹಿಳೆ, ವೈರಲ್
  • ವೃದ್ಧನಿಗೆ ವೈದ್ಯಕೀಯ ಸಮಸ್ಯೆ ಇದ್ದ ಕಾರಣ ಹೀಗೆ ಮಾಡಿದ್ದಾರೆ, ದಂಡ ವಿಧಿಸಿದ್ದೇವೆ ಎಂದ ಪೊಲೀಸರು
Delhi Metro Lift: ಸಾಮಾನ್ಯವಾಗಿ ಭಾರತದ ಯಾವುದೇ ಮೆಟ್ರೋಗಳಲ್ಲಿ ತಿನ್ನುವುದು, ಪಾನ್ ಜಗಿಯುವುದು, ಮೆಟ್ರೋದೊಳಗಿನ ಸಂಚಾರ ಭಾಗದಲ್ಲಿ ನಡೆದಾಡುವುದು ನಿಷೇಧ, ಆದರೆ, ಕೆಲವೊಮ್ಮೆ ನಿಯಮ ಉಲ್ಲಂಘಿಸಿ, ದಂಡ ಕಟ್ಟುವ ಪ್ರಸಂಗಗಳು ಬೆಳಕಿಗೆ ಬಂದಿರುವುದು ನಾವು ನೋಡಿಯೇ ಇದ್ದೇವೆ, ದೆಹಲಿ ಮೆಟ್ರೋದಲ್ಲಿ ವೃದ್ಧನೊಬ್ಬ ಲಿಫ್ಟ್​ನಲ್ಲಿಯೇ ಮೂತ್ರ ವಿಸರ್ಜನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಹೌದು, ದೆಹಲಿಯ ಕಲ್ಕಾಜಿ ಮೆಟ್ರೋ ನಿಲ್ದಾಣದ ಲಿಫ್ಟ್​ನಲ್ಲಿ ವೃದ್ಧನೊಬ್ಬ ಮೂತ್ರ ವಿಸರ್ಜನೆ ಮಾಡಿದ ಬಗ್ಗೆ ಯುವತಿಯೊಬ್ಬಳು ಮಾಹಿತಿ ಹಂಚಿಕೊಂಡಿದ್ದು, ಸದ್ಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ವೃದ್ಧನ ಪರವಾಗಿ ನಿಂತರೆ, ಇನ್ನು ಕೆಲ ನೆಟ್ಟಿಗರು ವೃದ್ಧನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ, ದಂಡ ವಿಧಿಸಬೇಕು ಎನ್ನುತ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ?

ನಾನು ಕಾಲ್ಕಜಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಆಗ ಇಲ್ಲಿ ನಿಂತಿರುವ ವ್ಯಕ್ತಿ ಲಿಫ್ಟ್​ನಲ್ಲಿ ಮೂತ್ರವಿಸರ್ಜನೆ ಮಾಡಿದ್ದಾರೆ ಎಂದು ಬಿಳಿ ಜುಬ್ಬಾ ತಲೆಗೆ ಮುಸ್ಲಿಂರ ಟೋಪಿ ಧರಿಸಿರುವ ವ್ಯಕ್ತಿ ಕಾಣಿಸುತ್ತಾರೆ. ವಿಡಿಯೋ ಮಾಡುತ್ತಿರುವುದನ್ನು ಕಂಡ ಆತ ಆಕಡೆ ಸರಿದು ಹೋಗುವುದು ಕಾಣಿಸುತ್ತದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಉಡಾಫೆ ಉತ್ತರ ಕೊಟ್ಟಿದ್ದಾನೆ ಎನ್ನಲಾಗಿದೆ.
'ಇಬ್ಬರು ಮಹಿಳೆಯರು ಇರುವಾಗ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುವುದನ್ನು ಊಹೆ ಮಾಡಿಕೊಳ್ಳಿ ಹೇಗಿರುತ್ತದೆ ಎಂದು ಮಹಿಳೆ ಹೇಳಿದ್ದಾರೆ. ಮುಂದುವರೆದು ವ್ಯಕ್ತಿ ಬಳಿ ಹೋಗಿ ಏನಿದು ನೀವು ಮಾಡಿದ್ದು ತಪ್ಪು ಎಂದೆನಿಸುವುದಿಲ್ಲವೇ ಎಂದಾಗ, ವೃದ್ಧನು, ಹೌದು ತಪ್ಪು ಮಾಡಿದ್ದೇನೆ ಕ್ಷಮಿಸಿ' ಎಂದಿದ್ದಾರೆ.

ದೆಹಲಿ ಮೆಟ್ರೋ ನಿಗಮ ಹೇಳಿದ್ದೇನು?

ಇನ್ನೂ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿ ಮೆಟ್ರೋ ರೈಲ ನಿಗಮ ಕೇಸ್​ ಅನ್ನು ಗಂಭೀರವಾಗಿ ಪರಿಗಣಿಡಿದ್ದು, ವೃದ್ಧನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದೃಢಪಡಿಸಿದೆ. ಈ ಬಗ್ಗೆ ಡಿಸಿಪಿ ಭರತ್​ ರೆಡ್ಡಿ ಸಹ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

ಪೊಲೀಸರು ಹೇಳಿದ್ದೇನು?

'ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದು, ಮೇ.15ರ ರಾತ್ರಿ 9.40ಕ್ಕೆ ವೃದ್ಧ ಜಾಮಿಯಾ ಮೆಟ್ರೋ ನಿಲ್ದಾಣದಿಂದ ಫರಿದಾಬಾದ್ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರಿಗೆ ಕಲ್ಕಾಜಿ ಮೆಟ್ರೋ ಬಳಿಗೆ ಬಂದಾಗ ಆತನಿಗೆ ತೀರ ತುರ್ತು ಪರಿಸ್ಥಿತಿ ಎದುರಾಯಿತು. ಶೌಚಾಲಯ ಪತ್ತೆ ಹಚ್ಚಲು ಸಾಧ್ಯವಾಗದೆ, ಲಿಫ್ಟ್​ನಲ್ಲಿ ಬಾಟಲಿ ಹಿಡಿದು ಮೂತ್ರ ವಿಸರ್ಜಿಸಿದ್ದಾರೆ. ಈ ಬಗ್ಗೆ ಪ್ರಯಾಣಿಕರು ಸಿಐಎಸ್ಎಫ್​ ಮತ್ತು ಡಿಎಂಆರ್​ಸಿ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಕೂಡಲೇ ಕ್ರಮ ಕೈಗೊಂಡಿದ್ದಾರೆ' ಎಂದು ಭರತ್​ ರೆಡ್ಡಿ ಹೇಳಿದರು.
'ವೃದ್ಧ ಮೂತ್ರ ವಿಸರ್ಜನಾ ನಿಯಂತ್ರಣಕ್ಕೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕಾರಣದಿಂದ ಪ್ರಯಾಣದ ಸಮಯದಲ್ಲಿ ಬಾಟಲಿ ಹಿಡಿದೇ ಇರುತ್ತಾರೆ. ಅಲ್ಲದೆ ಅದರಲ್ಲಿಯೇ ಮೂತ್ರ ವಿಸರ್ಜಿಸುತ್ತಾರೆ' ಎನ್ನುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ .
'ಆದರೆ, ಮೆಟ್ರೋದಲ್ಲಿ ಜನರಿಗೆ ಕಿರಿಕಿಯುಂಟು ಮಾಡಿದ ಅಲುವಾಗಿ ಡಿಎಂಆರ್​ಸಿ ಸೆಕ್ಷನ್​ 59ರಡಿ ದಂಡ ವಿಧಿಸಲಾಗುತ್ತದೆ. ಅವರು ವೈದ್ಯಕೀಯ ಸಮಸ್ಯೆ ಎದುರಿಸುತ್ತಿರುವ ಕಾರಣ ಯಾವುದೇ ಕ್ರಿಮಿನಲ್​ ಕೇಸ್ ವಿಧಿಸಿಲ್ಲ' ಎಂದಿದ್ದಾರೆ ಡಿಸಿಪಿ ಭರತ್​ ರೆಡ್ಡಿ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net