ಪ್ರಸ್ತುತ ದೇಶದಲ್ಲಿ ಭಯ ಹಾಗೂ ಆರ್ಥಿಕ ಸಂಕಷ್ಟದ ವಾತಾವರಣವಿದೆ ಎಂದ ಮಮತಾ ಬ್ಯಾನರ್ಜಿ, ಡಿಜಿಟಲ್ ಮಾಧ್ಯಮಗಳ ಧ್ವನಿ ಅಡಗಿಸಲಾಗುತ್ತಿದೆ ಎಂದು ದೂರಿದರು. ಯೂಟ್ಯೂಬ್, ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್‌ನಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದವರನ್ನು ಬಂಧಿಸಲಾಗುತ್ತಿದೆ. ಬಿಜೆಪಿಗೆ ಒಂದು ದೇಶ, ಒಂದು ಪಕ್ಷ ಎಂಬ ಸರ್ವಾಧಿಕಾರ ಬೇಕಾಗಿದೆ, ಇದನ್ನು ನಾವು ಒಪ್ಪಲ್ಲ. ಪೊಲೀಸರ ನಡೆ ಕೂಡ ಈಗ ಕಾನೂನುಬಾಹಿರವಾಗಿದೆ ಎಂದು ಆರೋಪಿಸಿದರು.