ಎರಡನೇ ಹಂತದ ಚುನಾವಣೆ ಪ್ರಚಾರದ ಭಾಗವಾಗಿ ಟಾಲಿಗಂಜ್‌ನಲ್ಲಿ ನಡೆದ ರೋಡ್‌ಶೋ ವೇಳೆ ಎಎನ್ಐ ಜೊತೆ ಮಾತನಾಡಿರುವ ಅವರು, ಮಮತಾ ಬ್ಯಾನರ್ಜಿ ಏನು ಹೇಳಲು ಬಯಸುತ್ತಾರೆ? ಗೂಂಡಾಗಳನ್ನು ಗೌರವಿಸಬೇಕೇ? ಸಾರ್ವಜನಿಕರಿಗೆ ತೊಂದರೆ ನೀಡುವವರನ್ನು ಅವರು ಗೌರವಿಸಬಹುದು, ನಾವಲ್ಲ. ಅವರ ಹೇಳಿಕೆ ಸ್ವೀಕಾರ್ಹವಲ್ಲ, ಅವರು ಕೋರ್ಟ್ನಲ್ಲೂ ಸೋಲುತ್ತಾರೆ ಎಂದು ಕಿಡಿಕಾರಿದ್ದಾರೆ.