ಡಿಸೆಂಬರ್ 6 ರಂದು ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಾಬರಿ ಮಸೀದಿ ಮಾದರಿಯ ಕಟ್ಟಡಕ್ಕೆ ಶಿಲಾನ್ಯಾಸ ಮಾಡುವುದಾಗಿ ಘೋಷಿಸಿದ ಬಳಿಕ ಟಿಎಂಸಿ ಕಬೀರ್ರನ್ನು ಅಮಾನತುಗೊಳಿಸಿತು. ಶಾಸಕ ಕಬೀರ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದು, ಡಿಸೆಂಬರ್ 22 ರಂದು ಹೊಸ ಪಕ್ಷವನ್ನು ಘೋಷಿಸುವ ಕುರಿತು ಸುಳಿವು ನೀಡಿದರು. ಅಮಾನತಾದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಕಬೀರ್, ಪಕ್ಷದ ಜಿಲ್ಲಾಧ್ಯಕ್ಷರು ಸಭೆಗೆ ಆಹ್ವಾನಿಸಿದ್ದಾರೆ, ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ, ಇದಾದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ನನ್ನನ್ನು ಪಕ್ಷದ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ, ಶಾಸಕ ಸ್ಥಾನದಿಂದ ಅಲ್ಲ, ಮೊದಲು ಸಭೆ ನಡೆಯಲಿ, ಅದಾದ ನಂತರ ಮಾತನಾಡುತ್ತೇನೆ ಎಂದು ತಿಳಿಸಿದರು.