ಎಸ್‌ಐಆರ್ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ನಡೆದರೆ ಎರಡು ವರ್ಷಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ, ಆದರೆ ಪ್ರಸ್ತುತ ಪ್ರಕ್ರಿಯೆಯನ್ನು ಕೇವಲ ಎರಡು ತಿಂಗಳುಗಳನ್ನು ಮೀಸಲಿಡಲಾಗಿದೆ ಎಂದರು. ಎಸ್‌ಐಆರ್ ಹೆಸರಿನಲ್ಲಿ ಚುನಾವಣೆಗೆ ಮುನ್ನವೇ ಬಡ ಜನರಿಗೆ ಕಿರುಕುಳ ನೀಡಲಾಗುತ್ತಿದೆ, ಬೂತ್ ಮಟ್ಟದ ಅಧಿಕಾರಿಗಳಿಗೆ ಹೆಸರುಗಳನ್ನು ಅಳಿಸಲು ಒತ್ತಡ ಹೇರಲಾಗುತ್ತಿದೆ, ಇದಕ್ಕೆ ನಿರಾಕರಿಸಿದರೆ ಜೈಲು ಶಿಕ್ಷೆಯ ಬೆದರಿಕೆ ಹಾಕಲಾಗುತ್ತಿದೆ, ಈ ಪ್ರಕ್ರಿಯೆಯ ಸಮಯದಲ್ಲಿ ಹಲವಾರು ಬಿಎಲ್‌ಒಗಳು ಸಾವನ್ನಪ್ಪಿದ್ದು, ಇದಕ್ಕೆ ಅಧಿಕಾರಿಗಳ ಮೇಲಿನ ಅತಿಯಾದ ಒತ್ತಡವೇ ಕಾರಣ ಎಂದರು.