ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮಮತಾ ಬ್ಯಾನರ್ಜಿ ನಿರಾಕರಣೆ; ಮುಂದೇನಾಗುತ್ತೆ? ತಜ್ಞರು ಏನು ಹೇಳ್ತಾರೆ? | Mamata Banerjee

ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ
Published on
ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಹೀನಾಯ ಸೋಲನ್ನು ಒಪ್ಪದ ಮಮತಾ ಬ್ಯಾನರ್ಜಿಯವರು ಇಂದು(ಮೇ 05) ಸುದ್ದಿಗೋಷ್ಠಿ ನಡೆಸಿ, ಚುನಾವಣೆಯಲ್ಲಿ ನಾವು ಸೋತಿಲ್ಲ, ಬಿಜೆಪಿ ಬಲವಂತವಾಗಿ ಜನಾದೇಶವನ್ನು ಕದ್ದಿದೆ. ಹೀಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂದು ಹೇಳಿದ್ದಾರೆ. ಹಾಗಾದ್ರೆ ಅವರು ರಾಜೀನಾಮೆ ಕೊಡದಿದ್ರೆ ಮುಂದೇನಾಗಲಿದೆ? ಕಾನೂನು ತಜ್ಞರು ಏನು ಹೇಳ್ತಾರೆ? ಇಲ್ಲಿ ಓದಿ.
ಪ್ರಸ್ತುತ ಪಶ್ಚಿಮ ಬಂಗಾಳ ಸರ್ಕಾರದ ಅವಧಿ ಮೇ 06ರಂದು ಕೊನೆಗೊಳ್ಳಲಿದೆ. ಈ ಕುರಿತು ಇಂಡಿಯಾ ಟುಡೇ ಜೊತೆ ಮಾತನಾಡಿರುವ ಹಿರಿಯ ವಕೀಲ ಶೇಖರ್ ನಫಡೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂಬ ಬ್ಯಾನರ್ಜಿಯವರ ಪ್ರತಿರೋಧ ಯಾವುದೇ ವ್ಯತ್ಯಾಸವನ್ನುಂಟು ಮಾಡಲ್ಲ. ಐದು ವರ್ಷಗಳ ಜನಾದೇಶವು ಮುಗಿದಿರುವುದರಿಂದ ಸರ್ಕಾರದ ಅವಧಿ ಕೊನೆಗೊಳ್ಳುತ್ತದೆ. ರಾಜ್ಯಪಾಲರು ರಾಜ್ಯ ವಿಧಾನಸಭೆಯನ್ನು ವಜಾಗೊಳಿಸಬಹುದು ಎಂದಿದ್ದಾರೆ.
ಚುನಾವಣಾ ಆಯೋಗವು ಅಗತ್ಯ ಅಧಿಸೂಚನೆಯನ್ನು ಹೊರಡಿಸಿದೆ. ಯಾವುದೇ ಸಮರ್ಥ ನ್ಯಾಯಾಲಯವು ಲಭ್ಯವಿರುವ ಆಧಾರದ ಮೇಲೆ ಚುನಾವಣೆಯನ್ನು ರದ್ದುಗೊಳಿಸದ ಹೊರತು, ಚುನಾವಣಾ ಆಯೋಗವು ಘೋಷಿಸಿದ ಫಲಿತಾಂಶಗಳಿಗೆ ಎಲ್ಲರೂ ಬದ್ದರಾಗಿರಬೇಕು. ಮತ್ತು ಈ ಸಂದರ್ಭಗಳಲ್ಲಿ ಗೌರವಾನ್ವಿತ ಸಿಎಂ ರಾಜೀನಾಮೆಯನ್ನು ಸಲ್ಲಿಸುವ ಬಾಧ್ಯತೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಸಿಎಂ ಆಯೋಗದ ಸಾಂವಿಧಾನಿಕ ನಿಯಮಗಳನ್ನು ಪಾಲಿಸದಿದ್ದರೆ, ರಾಜ್ಯಪಾಲರಿಗೆ ಸರ್ಕಾರವನ್ನು ವಜಾಗೊಳಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಅದು ಕೂಡ ಸಂವಿಧಾನದ ನಿಬಂಧನೆಗಳಿಗೆ ಅನುಗುಣವಾಗಿರುತ್ತದೆ. ಜೊತೆಗೆ ಸಿಎಂ ಮಮತಾ ಬ್ಯಾನರ್ಜಿಯವರು ಯಾವುದೇ ವೇದಿಕೆಯಲ್ಲೂ ಫಲಿತಾಂಶವನ್ನು ಪ್ರಶ್ನಿಸಬಹುದು. ಯಾರೂ ಅವರ ಮೇಲೆ ಆ ರೀತಿಯ ನಿರ್ಬಂಧವನ್ನು ಹೇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದೇನು?

ಬಂಗಾಳ ಚುನಾವಣೆ ಬಗ್ಗೆ ಮಮತಾ ಬ್ಯಾನರ್ಜಿಯವರು ಇಂದು(ಮೇ 05) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದದಿದ್ದಾರೆ. ನಾನು ರಾಜೀನಾಮೆ ನೀಡಲು ರಾಜಭವನಕ್ಕೆ ಹೋಗುವುದಿಲ್ಲ. ನನ್ನನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಲು ಯಾರಿಗೂ ಹಕ್ಕಿಲ್ಲ. ಇದು ಜನರ ಸೋಲಲ್ಲ, ವ್ಯವಸ್ಥಿತವಾಗಿ ಮಾಡಲಾದ ಸಂಚು. ನಾನು ಈಗ ಮುಕ್ತ ಹಕ್ಕಿ ಎಂದು ಆಕ್ರೋಶ ಹೊರಹಾಕಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net