ದೀಪಾವಳಿಯನ್ನು ಸಂತೋಷದ ಈದ್ ಎಂದು ಬಣ್ಣಿಸಿದ ಮಲ್ಲಿಕಾರ್ಜುನ ಖರ್ಗೆ: ಶುಭಕೋರುವುದರಲ್ಲೂ ಕೋಮು ಓಲೈಕೆ ಎಂದು ಬಿಜೆಪಿ ಕಿಡಿ | Mallikarjun Kharge

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎರಡು ದಿನಗಳ ಹಿಂದೆ ದೇಶದ ಜನತೆಗೆ ಶುಭಕೋರುವ ವೇಳೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ದೀಪಾವಳಿಯನ್ನು ಸಂತೋಷದ ಈದ್ ಎಂದು ಬಣ್ಣಿಸಿದ್ದು, ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ಹಬ್ಬಕ್ಕೆ ಶುಭಕೋರುವುದರಲ್ಲೂ ಕಾಂಗ್ರೆಸ್ ಕೋಮು ಓಲೈಕೆ ಮಾಡ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Published on: 

ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎರಡು ದಿನಗಳ ಹಿಂದೆ ದೇಶದ ಜನತೆಗೆ ಶುಭಕೋರುವ ವೇಳೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ದೀಪಾವಳಿಯನ್ನು ಸಂತೋಷದ ಈದ್ ಎಂದು ಬಣ್ಣಿಸಿದ್ದು, ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ಹಬ್ಬಕ್ಕೆ ಶುಭಕೋರುವುದರಲ್ಲೂ ಕಾಂಗ್ರೆಸ್ ಕೋಮು ಓಲೈಕೆ ಮಾಡ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ನ. 7ರಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ದೇಶದ ಜನತೆಗೆ ದೀಪಾವಳಿ ಹಬ್ಬಕ್ಕೆ ಶುಭಕೋರಿದ್ದ ಮಲ್ಲಿಕಾರ್ಜುನ ಖರ್ಗೆಯವರು, ಹಬ್ಬವನ್ನು ಸಂತೋಷದ ಈದ್ ಎಂದು ಬಣ್ಣಿಸಿ, ಶಾಂತಿ ಮತ್ತು ರಾಷ್ಟ್ರೀಯ ಐಕ್ಯತೆಗೆ ಕರೆ ನೀಡಿದ್ದರು. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ಅನೇಕರು ಇದನ್ನು 'ಸಂತೋಷದ ಈದ್' ಎಂದು ಆಚರಿಸುತ್ತಾರೆ ಎಂದು ಹೇಳಿದ್ದರು.

ದೇಶವನ್ನು ರಕ್ಷಿಸಲು ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಬಲಪಡಿಸಲು, ಜನರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡಬೇಕು. ಯಾರಾದರೂ ಪರಸ್ಪರ ಸಂಘರ್ಷದಲ್ಲಿದ್ದರೆ ಅಥವಾ ತಪ್ಪು ತಿಳುವಳಿಕೆಗಳನ್ನು ಹೊಂದಿದ್ದರೆ, ಅಂತಹ ಭಿನ್ನಾಭಿಪ್ರಾಯಗಳನ್ನು ಬದಿಗಿಡುವಂತೆ ನಾನು ವಿನಂತಿಸುತ್ತೇನೆ. ನಮ್ಮ ದೇಶವನ್ನು ರಕ್ಷಿಸಲು ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಬೆಳೆಸಲು ನಾವೆಲ್ಲರೂ ಪೂರ್ಣ ಹೃದಯದಿಂದ ಶ್ರಮಿಸೋಣ ಎಂದು ಕರೆ ನೀಡಿದ್ದರು.

ಕೋಮು ಓಲೈಕೆ ಎಂದು ಬಿಜೆಪಿ ಆಕ್ರೋಶ

ಸಂತೋಷದ ಈದ್ ಎಂಬ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಗೆ ಸೋಮವಾರ(ನ. 09) ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಮತ್ತು ಕಾಂಗ್ರೆಸ್ ಪಕ್ಷವು ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸಿ.ಆರ್. ಕೇಶವನ್, ಕಾಂಗ್ರೆಸ್ ಪದೇ ಪದೇ ಹಿಂದೂ ಧಾರ್ಮಿಕ ಸಂಪ್ರದಾಯಗಳು ಮತ್ತು ಕಾರ್ಯಕ್ರಮಗಳನ್ನು ಅವಮಾನಿಸುತ್ತಿದೆ. ಆ ಪಕ್ಷವು "ಸನಾತನ ವಿರೋಧಿ" ಮತ್ತು "ಹಿಂದೂ ವಿರೋಧಿ" ಎಂದು ಕಿಡಿಕಾರಿದ್ದಾರೆ.z

ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದಿರುವ ಅವರು, ಖರ್ಗೆ ಅವರು ಹಿಂದೆ 'ಮಹಾ ಕುಂಭ'ದ ಬಗ್ಗೆ ವ್ಯಕ್ತಪಡಿಸಿದ್ದ ಟೀಕೆ ಮತ್ತು ರಾಹುಲ್ ಗಾಂಧಿ ಅವರು 'ಛತ್ ಪೂಜೆ'ಯ ಬಗ್ಗೆ ಆಡಿದ್ದ ಮಾತುಗಳನ್ನು ಉಲ್ಲೇಖಿಸಿ ಟೀಕಿಸಿದ್ದಾರೆ.

ಅದೇ ರೀತಿ ಇನ್ನೊಬ್ಬ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಸಹ, ಖರ್ಗೆ ಅವರು ಬಳಸಿದ ಪದಗಳು ಮತದಾರರನ್ನು ಓಲೈಸುವ ಉದ್ದೇಶವನ್ನು ಹೊಂದಿದ್ದವು. ಅವರು ಬಾಟ್ಲಾ ಹೌಸ್ ಎನ್‌ಕೌಂಟರ್ ಮತ್ತು ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಅವರ ಪ್ರತಿಕ್ರಿಯೆಗಳನ್ನು ಉಲ್ಲೇಖಿಸಿ ಕಿಡಿಕಾರಿದ್ದಾರೆ. ಮತ್ತು ಇಲ್ಲಿಯವರೆಗೂ ಕಾಂಗ್ರೆಸ್ ನಾಯಕರು ಅಯೋಧ್ಯೆಗೆ ಭೇಟಿ ನೀಡದಿರುವುದನ್ನು ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).