ಮಾಧ್ಯಮಗಳು ಪ್ರಶ್ನಿಸಿದಾಗ ಗಾಬರಿಗೊಂಡ ರಾಕಿಬುಲ್, ಭ್ರಷ್ಟಾಚಾರ ಮತ್ತು ವಂಚನೆಗೆ ತನ್ನದೇ ಪಕ್ಷವನ್ನು ದೂರಿದ್ದು, ಹಿಂದಿನ ಟಿಎಂಸಿ ಸರ್ಕಾರವು ಭ್ರಷ್ಟ ಸರ್ಕಾರವಾಗಿತ್ತು, ಆದ್ದರಿಂದ ನಾವು ಈ ಸೌಲಭ್ಯಗಳನ್ನು ಪಡೆದುಕೊಂಡೆವು ಎಂದು ಹೇಳಿರುವುದಾಗಿ ಆನಂದಬಜಾರ್ ಪತ್ರಿಕೆಯ ವರದಿ ಮಾಡಿದೆ. ಸದ್ಯ ಪೊಲೀಸರ ವಶದಲ್ಲಿರುವ ಈ ಟಿಎಂಸಿ ನಾಯಕ, ತನ್ನ ಖಾತೆಗೆ ಹಣ ಜಮಾ ಆಗಿರುವುದರ ಬಗ್ಗೆ ತಾನು ಬಿಡಿಒ ಅವರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ, ಇತ್ತ ಹಣ ಬರುತ್ತಿದ್ದರೆ ಬರಲಿ, ಅದರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ನನ್ನ ಪಕ್ಷದ ಸಹೋದ್ಯೋಗಿಗಳು ನನಗೆ ಹೇಳಿದರು ಎಂದು ಮತ್ತಷ್ಟು ಸ್ಫೋಟಕ ಮಾಹಿತಿ ನೀಡಿದ್ದಾನೆ.