

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ದೂರದೂರು ಹಾಗೂ ಭಾರತೀಯ ಶ್ರೀಮಂತ ಸಂಸ್ಕೃತಿ, ಪರಂಪರೆ, ಕೋಟೆ ಕತೆ ತಿಳಿಯಲು ಹೋದಾಗ ಕಾಡುವ ಸಮಸ್ಯೆ ಎಂದರೆ ಗೈಡ್ ಸಿಗದೆ ಇರುವುದು. ಸಿಕ್ಕರೂ ಕಾಡುವುದು ದುಬಾರಿ ಹಣ ಕೇಳುವ ಸಮಸ್ಯೆ. ಹೀಗಾಗಿ ಯಾರೂ ಬೇಡ ಎಂದು ಕಂಡಿದ್ದನ್ನು ನೋಡಿ ಬರೋದುಂಟು. ಆದರೆ ಇನ್ಮುಂದೆ ಆ ಸಮಸ್ಯೆ ಇರೋದಿಲ್ಲ ಪ್ರವಾಸಿಗರಿಗೆ ಅನುಕೂಲವಾಗಲಿ ಎಂದು ಪ್ರವಾಸೋದ್ಯಮ ಸಚಿವಾಲಯದೊಂದಿಗೆ ಮೇಕ್ ಮೈ ಟ್ರಿಪ್ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಆ ಮೂಲಕ ನೀವು ಆನ್‌ಲೈನ್‌ನಲ್ಲೇ ಗೈಡ್ ಬುಕ್ ಮಾಡಿಕೊಳ್ಳಬಹುದು
ಈ ಗೈಡೆಡ್ ಟೂರ್‌ಗಳ ದರ ಕೇವಲ 500 ರೂ.ಗಳಿಂದ ಆರಂಭವಾಗಲಿದೆ. ನಡಿಗೆ, ಸೈಕ್ಲಿಂಗ್, ವಾಹನ ಮತ್ತು ಹಲವು ದಿನಗಳ ಪ್ರವಾಸದ ಆಯ್ಕೆಗಳೂ ಇದರಲ್ಲಿವೆ.
ರೋಚಕ ಟೂರ್ ಪ್ಯಾಕೇಜ್‌ಗಳಲ್ಲಿ, ಕತ್ತಲಾದ ಮೇಲೆ ಮುಸ್ಸೂರಿಯ ಬ್ರಿಟಿಷ್ ಕಾಲದ ಬೀದಿಗಳಲ್ಲಿ ಘೋಸ್ಟ್ ವಾಕ್, ವಾರಣಾಸಿಯ ಗಂಗಾ ನದಿ ತೀರದಲ್ಲಿ ಸೂರ್ಯೋದಯ ವೀಕ್ಷಣೆ ಮತ್ತು ಸಂಜೆಯ ಗಂಗಾ ಆರತಿ ದರ್ಶನ, ಗೋವಾದ ಹಳ್ಳಿಯಲ್ಲಿ ಎಲೆಕ್ಟ್ರಿಕ್ ಸೈಕಲ್ ರೈಡ್ ಹಾಗೂ ಸ್ಥಳೀಯರ ಮನೆಯೊಂದರಲ್ಲಿ ಸಂಜೆಯ ಚಹಾ - ತಿಂಡಿ ಸವಿಯುವ ಅವಕಾಶಗಳು ಇವೆ.