ಕೇಂದ್ರದ ಅಧಿಕಾರ ರಚನೆಯಲ್ಲಿ ಶೀಘ್ರದಲ್ಲೇ ಭಾರಿ ಬದಲಾವಣೆ; ಭದ್ರತಾ ಸಲಹೆಗಾರ ಹುದ್ದೆಯಿಂದ ಅಜಿತ್ ದೋವಲ್ ನಿರ್ಗಮನ? | Ajit Doval

ಪ್ರಧಾನಿ ಮೋದಿ ಮತ್ತು ಅಜಿತ್ ದೋವಲ್
ಪ್ರಧಾನಿ ಮೋದಿ ಮತ್ತು ಅಜಿತ್ ದೋವಲ್
Published on
ನವದೆಹಲಿ: ಕೇಂದ್ರ ಸರ್ಕಾರದ ಅಧಿಕಾರ ರಚನೆಯಲ್ಲಿ ಶೀಘ್ರದಲ್ಲೇ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆಯಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರ 81 ವರ್ಷದ ಅಜಿತ್ ದೋವಲ್(Ajit Doval) ಮತ್ತು 78 ವರ್ಷದ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರನ್ನು ಆಯಾ ಪ್ರಮುಖ ಹುದ್ದೆಗಳಿಂದ ತೆಗೆದುಹಾಕಬಹುದು ಎಂದು ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇಬ್ಬರು ಹಿರಿಯ ನಾಯಕರನ್ನು ರಾಜ್ಯಪಾಲರು ಮತ್ತು ಇತರ ಹುದ್ದೆಗಳಾಗಿ ನೇಮಿಸುವ ಸಾಧ್ಯತೆಗಳಿವೆ ಎಂದು ವರದಿಗಳು ಉಲ್ಲೇಖಿಸಿವೆ. ಜೊತೆಗೆ ಸಚಿವ ಸಂಪುಟದಲ್ಲೂ ಭಾರಿ ಬದಲಾವಣೆಯಾಗುವ ಸಾಧ್ಯತೆಗಳಿವೆ. ಸೆಪ್ಟೆಂಬರ್ 7 ಮತ್ತು 8 ರಂದು ಸಂಸತ್ತಿನ ವಿಶೇಷ ಅಧಿವೇಶನಗಳನ್ನು ನಡೆಸಿ, ಸೀಮಾ ನಿರ್ಣಯ ಮತ್ತು ಮಹಿಳಾ ಮೀಸಲಾತಿ ಮಸೂದೆಗಳನ್ನು ಅಂಗೀಕರಿಸಲು ಪ್ರಧಾನಿ ಮೋದಿ ಉದ್ದೇಶಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಚರ್ಚಿಸಿದ್ದು, ಈ ವಿಶೇಷ ಅಧಿವೇಶನಗಳನ್ನು ಸಂಸತ್ತಿನ ಮಳೆಗಾಲದ ಅಧಿವೇಶನದ ಭಾಗವಾಗಿ ನಡೆಸಲಾಗುವುದು, ಅದಕ್ಕಾಗಿಯೇ ರಾಷ್ಟ್ರಪತಿಗಳು ಹಿಂದಿನ ಮಳೆಗಾಲದ ಅಧಿವೇಶನಗಳನ್ನು ಮುಂದೂಡಲಿಲ್ಲ ಎನ್ನಲಾಗಿದೆ.
ಡಿಎಂಕೆ ಮತ್ತು ಎನ್‌ಸಿಪಿ(ಎಸ್​ಪಿ) ಜೊತೆಗಿನ ಮಾತುಕತೆ ಈಗಾಗಲೇ ಪೂರ್ಣಗೊಂಡಿದೆ ಮತ್ತು ಈ ಪಕ್ಷಗಳು ಎನ್‌ಡಿಎಗೆ ಸೇರಲು ಮತ್ತು ಕೇಂದ್ರದಲ್ಲಿ ಪ್ರಮುಖ ಸಂಪುಟ ಹುದ್ದೆಗಳನ್ನು ವಹಿಸಿಕೊಳ್ಳಲು ಸಿದ್ಧವಾಗಿವೆ ಎಂಬ ಊಹಾಪೋಹಗಳು ಹರಡಿವೆ. ಸೆಪ್ಟೆಂಬರ್ ಮೊದಲ ವಾರದಲ್ಲೇ ಈ ಎಲ್ಲಾ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net