ಇಂದು ಬೆಳಗ್ಗೆ ಸುಮಾರು 10:45ರ ಸುಮಾರಿಗೆ ಈ ಅಪಘಾತ ನಡೆದಿದೆ. ಪ್ರಯಾಣಿಕರಿಂದ ತುಂಬಿದ್ದ ಇಕೋ ಕಾರು ಕಲ್ಯಾಣ್‌ನಿಂದ ಮುರ್ಬಾದ್ ಕಡೆಗೆ ಅತಿವೇಗವಾಗಿ ಸಾಗುತ್ತಿತ್ತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 61ರ ರಾಯ್ತಾ ಸೇತುವೆಯ ಮೇಲೆ ಎದುರಿನಿಂದ ಬಂದ ಸಿಮೆಂಟ್ ಮಿಕ್ಸರ್ ಟ್ರಕ್‌ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಕೋ ಕಾರು ಅಕ್ಷರಶಃ ನುಜ್ಜುಗುಜ್ಜಾಗಿದ್ದು, ಒಳಗೆ ಕುಳಿತಿದ್ದ ಪ್ರಯಾಣಿಕರಿಗೆ ಚೇತರಿಸಿಕೊಳ್ಳಲು ಕಾಲಾವಕಾಶವೇ ಸಿಕ್ಕಿಲ್ಲ.