ಬಿಜೇಂದ್ರ ಗುಪ್ತಾ ಪತ್ನಿ ಸುಮನ್ ಗುಪ್ತಳನ್ನು ವಿಶೇಷ ತನಿಖಾ ತಂಡ ಬಂಧಿಸಿತ್ತು. ಈ ಜಾಲದ ಹಣಕಾಸು ವ್ಯವಹಾರಗಳನ್ನು ನಿರ್ವಹಿಸಲು ಮತ್ತು ಪತಿ ತಲೆಮರೆಸಿಕೊಳ್ಳಲು ಅವಳು ಸಹಾಯ ಮಾಡಿದ್ದಾಳೆ ಎಂದು ಪೊಲೀಸರು ಆರೋಪಿಸಿದ್ದರು. ಗುಪ್ತಾ ವಿರುದ್ಧ ಪೊಲೀಸರು ಲುಕ್-ಔಟ್ ಹೊರಡಿಸಿದ್ದರು. ಅಲ್ಲದೆ, ಉತ್ತರ ಪ್ರದೇಶ, ಬಿಹಾರ ಮತ್ತು ಒಡಿಶಾದಲ್ಲೂ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಆತ ಆರೋಪಿಯಾಗಿದ್ದು, ಒಡಿಶಾ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದನು.