'ಅಪ್ಪಾ... ನಾವು ಸತ್ತುಹೋಗ್ತೀವಿ': ವಡಪಾವ್, ಚಾಕೋಲೇಟ್ ಕೊಡಿಸೋದಾಗಿ ಇಬ್ಬರು ಮಕ್ಕಳನ್ನು ಕಾಲುವೆಗೆ ತಳ್ಳಿದ ಪಾಪಿ ತಂದೆ..Maharashtra

ಮೃತ ಮಕ್ಕಳು
ಮೃತ ಮಕ್ಕಳು
Published on: 
  • ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಪೈಥಾನ್ ಪಟ್ಟಣದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ.

  • ಇಬ್ಬರು ಮಕ್ಕಳನ್ನು ಕಂದಕಕ್ಕೆ ಎಸೆದ ಕ್ರೂರಿ ತಂದೆ.

  • 40 ವರ್ಷ ವಯಸ್ಸಿನ ಸೋಮನಾಥ್ ದಾಮೋದರ್ ರೋಡ್ಗೆ ಎಂಬಾತನಿಂದ ಕೃತ್ಯ.

  • ಚಾಕೊಲೇಟ್ ಹಾಗೂ ವಡಾಪಾವ್ ಕೊಡಿಸುವುದಾಗಿ ನಂಬಿಸಿ ಕೊಲೆ.

ಪುಣೆ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಪೈಠಾಣ್ ಪಟ್ಟಣದಲ್ಲಿ ಅತ್ಯಂತ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. 40 ವರ್ಷದ ವ್ಯಕ್ತಿಯೊಬ್ಬ ಏನೂ ಅರಿಯದ ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದು ಕೊಲೆ ಮಾಡುವ ಮೂಲಕ, ತಂದೆ-ಮಕ್ಕಳು ಎನ್ನುವ ಸಂಬಂಧಕ್ಕೆ ಮಸಿ ಬೆಳೆಯುವಂತೆ ಮಾಡಿದ್ದಾನೆ.

ಸೋಮನಾಥ್ ದಾಮೋದರ್ ರೋಡ್ಗೆ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದ್ದು, ಈತನ ಇಬ್ಬರು ಗಂಡು ಮಕ್ಕಳಾದ 7 ವರ್ಷದ ಆರ್ಯನ್ ಮತ್ತು 5 ವರ್ಷದ ಶ್ಯಾಮ್ ಕೊಲೆಯಾದವರು.

ಚಾಕೊಲೇಟ್, ವಡಪಾವ್ ಆಮಿಷ

ಸೋಮವಾರ ಸಂಜೆ ಆರೋಪಿ ಸೋಮನಾಥ್ ಆರ್ಯನ್ ಮತ್ತು ಶ್ಯಾಮ್​ನನ್ನು ಸ್ಕೂಟರ್​ನಲ್ಲಿ ಹೊರಗೆ ಕರೆದೊಯ್ದಿದ್ದ. ಮಕ್ಕಳೊಂದಿಗೆ ಪ್ರೀತಿಯಿಂದ ವರ್ತಿಸುವಂತೆ ನಟಿಸಿ, ಅವರಿಗೆ ಇಷ್ಟವಾದ ಚಾಕೊಲೇಟ್ ಹಾಗೂ ವಡಾಪಾವ್ ಕೊಡಿಸುವುದಾಗಿ ನಂಬಿಸಿದ್ದ. ಮನೆಯಿಂದ ಪೈಠಾಣ್ ಪಟ್ಟಣದ ಗೋದಾವರಿ ನದಿ ಬಳಿಯ ಕಾಲುವೆ ಪ್ರದೇಶಕ್ಕೆ ಕರೆದೊಯ್ದಿದ್ದನು.

ಕೇಳಿಕೊಂಡ್ರು ಬಿಡದ ತಂದೆ

ಕಾಲುವೆಗೆ ಮಕ್ಕಳನ್ನು ಎಸೆಯಲು ಮುಮದಾದಾಗ...ತಂದೆ ನಮ್ಮನ್ನು ತಳ್ಳಲು ಬಯಸುತ್ತಿದ್ದಾನೆ ನಾವು ಸಾಯುತ್ತೇವೆ ಎನ್ನುವುದನ್ನು ಅರಿತ ಮಕ್ಕಳು, 'ಅಪ್ಪ ನಾವು ಸತ್ತು ಹೋಗ್ತೀವಿ. ತಳ್ಳಬೇಡಿ...ದಯವಿಟ್ಟು ಹೀಗೆ ಮಾಡಬೇಡಿ' ಎಂದು ಕೈಮುಗಿದು ಕಣ್ಣೀರಾ ಹಾಕಿ ಬಿಕೋ ಎನ್ನುವಂತೆ ಅತ್ತಿದ್ದಾರೆ. ಆದರೆ, ಮಕ್ಕಳ ಕಣ್ಣೀರು ಮತ್ತು ದಯನೀಯ ಪ್ರಾಣಭಿಕ್ಷೆಯನ್ನು ಆ ನಿರ್ದಯಿ ತಂದೆ ಕ್ಯಾರೆ ಎನ್ನದೆ, ತನ್ನ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದ್ದಾನೆ

ಈ ಘಟನೆ ನಡೆಯುತ್ತಿದ್ದ ವೇಳೆ ಅದೇ ಕಾಲುವೆ ಬಳಿ ಇದ್ದ ಸ್ಥಳೀಯ ರೈತರು ಇದನ್ನು ಗಮನಿಸಿ, ಕೂಡಲೇ ಓಡಿಬಂದು ಆರೋಪಿಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ತನ್ನ ಕೃತ್ಯವನ್ನು ಮುಚ್ಚಿಕೊಳ್ಳಲು ಮುಂದಾದ ಆರೋಪಿ, ತಡೆಯಲು ಬಂದ ರೈತರ ಮೇಲೆ ಕಲ್ಲುಗಳನ್ನು ಎಸೆದು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.

ಸ್ಥಳೀಯ ರೈತರು ತಕ್ಷಣವೇ ಈ ಕುರಿತು ಪಾಚೋಡ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಸೋಮನಾಥ್ ದಾಮೋದರ್ ರೋಡ್ಗೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಠಾಣೆಯಲ್ಲಿ ನಡೆಸಿದ ತೀವ್ರ ವಿಚಾರಣೆಯ ವೇಳೆ ಆರೋಪಿ ತಾನು ಮಕ್ಕಳನ್ನು ಕಾಲುವೆಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಸೋಮವಾರ ರಾತ್ರಿಯಿಂದಲೇ ಪೊಲೀಸರು ಮತ್ತು ನುರಿತ ಮುಂಗಲ್ ತಜ್ಞರ (ಡೈವರ್ಸ್) ಜಂಟಿ ತಂಡವು ನೀರಿನಲ್ಲಿ ನಾಪತ್ತೆಯಾಗಿರುವ ಮಕ್ಕಳಿಗಾಗಿ ಕಾನಲ್‌ನಲ್ಲಿ ಭಾರಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಆದರೆ, ರಾತ್ರಿಯಿಡೀ ಹುಡುಕಾಟ ನಡೆಸಿದರೂ ಇದುವರೆಗೆ ಮಕ್ಕಳ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ, (ಏಜೆನ್ಸೀಸ್).