ಪ್ರೀತಿಗೆ ವಿರೋಧ, ಕಳ್ಳ ಎಂದು ಅವಮಾನಿಸಿ ಹಲ್ಲೆ; ಪ್ರೇಯಸಿ ಕುಟುಂಬಸ್ಥರ ಕಿರುಕುಳದ ಬಗ್ಗೆ ಡೆತ್​ನೋಟ್​ ಬರೆದಿಟ್ಟು ಯುವಕ ಸೂಸೈಡ್..Maharashtra Man Dies By Suicide

maharashtra man dies by suicide
maharashtra man dies by suicide
Published on
ಮುಂಬೈ: ಪ್ರೀತಿಸಿದ ಯುವತಿ ಮನೆಯವರು ಕೊಟ್ಟ ಕಿರುಕುಳ ತಾಳಲಾರದೆ ಮಹಾರಾಷ್ಟ್ರದಲ್ಲಿ 23 ವರ್ಷದ ಯುವಕನೊಬ್ಬ ಆತ್ಮಹತ್ಯೆ (Maharashtra Man Dies By Suicide)ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಆತನು ಬರೆದಿಟ್ಟಿರುವ ಡೆತ್​ ನೋಟ್​ ಪೊಲೀಸರಿಗೆ ಸಿಕ್ಕಿದ್ದು, ತನಿಖೆ ಆರಂಭಿಸಿದ್ದಾರೆ.
23 ವರ್ಷದ ಬೀಡ್ ಜಿಲ್ಲೆಯ ನಿವಾಸಿಧ್ಯಾನೇಶ್ವರ್​​ ಕೊಕಾಟೆ ಮೃತಪಟ್ಟಿರುವ ಯುವಕ ಎಂದು ಗುರುತಿಸಲಾಗಿದೆ. ಜ್ನಾನೇಶ್ವರ್​​ ತನ್ನ ಹಳ್ಳಿಯ ಸಮೀಪವೇ ಇದ್ದ ಯುವತಿಯೊಬ್ಬರನ್ನು ಪ್ರೇಮಿಸುತ್ತಿದ್ದನು. ಇಬ್ಬರು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಆಕೆಯ ಪೋಷಕರು ನಿರಾಕರಿಸಿ, ಆತನಿಗೆ ಅವಮಾನಿಸಿದ್ದರು. ಇದನ್ನು ಸಹಿಸಲಾಗದೆ ನೊಂದು ಟೈರ್​ ಶಾಪ್​ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಪ್ರೀತಿ, ಮದುವೆಗೆ ನಿರಾಕರಣೆ

ತಮ್ಮ ಪ್ರೇಮ ಮತ್ತು ಮದುವೆ ಬಗ್ಗೆ ಯುವತಿಯ ಪೋಷಕರ ಬಳಿ ಇಬ್ಬರು ಹೇಳಿಕೊಂಡಿದ್ದರು. ಆದರೆ ಅಯುವತಿ ಮನೆಯ ಪೋಷಕರು ಸುತಾರಾಂ ಒಪ್ಪಲಿಲ್ಲ. ಪೋಷಕರ ವಿರೋಧದ ಮಧ್ಯೆಯೂ ಇಬ್ಬರು ಭೇಟಿಯಾಗುತ್ತಿದ್ದರು ಮತ್ತು ಮಾತನಾಡುತ್ತಿದ್ದರು ಎನ್ನಲಾಗಿದೆ.

ಹಲ್ಲೆ ಮಾಡಿದ್ದರು

ಧ್ಯಾನೇಶ್ವರ್​​ ಕೊಕಾಟೆ ತಾಯಿ ಈ ಬಗ್ಗೆ ಮಾತನಾಡಿದ್ದು, "ಯುವತಿಯ ಮನೆಯವರು ಒಂದು ದಿನ ಮಾತನಾಡಬೇಕು ಎಂದು ಅವನನ್ನು ಕರೆದುಕೊಂಡು ಹೋಗಿ ಕ್ರೂರವಾಗಿ ಥಳಿಸಿದರು. ಹೀನಾಯವಾಗಿ ಅವಮಾನಿಸಿದರು. ಆತನ ಫೋನ್​, ಟು ವೀಲರ್​​ ಕಸಿದುಕೊಂಡು ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದಾರೆ. ನನ್ನ ಮಗನಿಗೆ ನ್ಯಾಯ ಕೊಡಿಸಬೇಕು. ಆತನ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.
ಯುವತಿಯ ಪೋಷಕರು ನಮ್ಮ ಮೇಲೆಯೂ ಹಲ್ಲೆ ಮಾಡುತ್ತೇವೆ ಎಂದು ಹೇಳಿದ್ದರು. ಇದನ್ನು ನನ್ನ ಮಗನಿಗೆ ಸಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಧುಲೆ-ಸೋಲಾಪುರ ಹೆದ್ದಾರಿಯಲ್ಲಿರುವ ಟೈರ್ ಪಂಕ್ಚರ್ ಅಂಗಡಿಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಡೆತ್​ನೋಟ್​ನಲ್ಲಿ ಏನಿದೆ?

"ನನ್ನ ಪ್ರೇಯಸಿಯ ಕುಟುಂಬಸ್ಥರು ಒಂದು ದಿನ ನನಗೆ ತೀವ್ರವಾಗಿ ಥಳಿಸಿದರು. ಕಳ್ಳ ಎಂದು ನನ್ನ ಮೇಲೆ ಆರೋಪ ಮಾಡಿದರು. ಪ್ರೀತಿ ಮುಂದುವರೆಸಿದರೆ, ಕೊಲೆ ಮಾಡುತ್ತೇವೆ ಎಂದು ಜೀವಬೆದರಿಕೆ ಹಾಕಿದ್ದರು. ನನ್ನ ಸಾವಿಗೆ ಅವರೇ ಕಾರಣ" ಎಂದು ಆತ ಬರೆದುಕೊಂಡಿದ್ದಾನೆ.

ನಾಲ್ವರ ವಿರುದ್ಧ ಕೇಸ್

ಸದ್ಯ ಯುವಕನ ಡೆತ್​ನೋಟ್​ ಆಧಾರದ ಮೇಲೆ ನಾಲ್ವರ ವಿರುದ್ಧ ಕೇಸ್​ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ, (ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net