ಅಜಿತ್​ ಪವಾರ್​ರ ಫಂಢ್​ ಹೇಳಿಕೆ; ಅಭಿವೃದ್ದಿ ಆಧಾರದ ಮೇಲೆ ಮತಯಾಚಿಸಿ ಎಂದ ಶರದ್​ ಪವಾರ್​ | Sharad Pawar

Sharad Pawar | ಹಿರಿಯ ನಾಯಕ ಶರದ್ ಪವಾರ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್​
Sharad Pawar | ಹಿರಿಯ ನಾಯಕ ಶರದ್ ಪವಾರ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್​
Published on
ಮುಂಬೈ: ನಿಮ್ಮ ಬಳಿ ಮತಗಳಿವೆ, ನನ್ನ ಬಳಿ ಹಣವಿದೆ. ಜನರು ನಮ್ಮ ಪಕ್ಷದ ಅಭ್ಯರ್ಥಿಗಳನ್ನು ತಿರಸ್ಕರಿಸಿದರೆ, ನಾನು ಜನರನ್ನು ತಿರಸ್ಕರಿಸುತ್ತೇನೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್​ಗೆ, ಹಿರಿಯ ನಾಯಕ ಶರದ್ ಪವಾರ್ ತಿರುಗೇಟು ನೀಡಿದ್ದಾರೆ.
ವಿಡಿಯೋವೊಂದರಲ್ಲಿ ಮಾತನಾಡಿರುವ ಶರದ್​​ ಪವಾರ್​, ತಾವು ಮಾಡಿರುವ ಅಭಿವೃದ್ದಿಯ ಆಧಾರದ ಮೇಲೆ ಮತಗಳನ್ನು ಪಡೆಯಬೇಕೇ ಹೊರತು, ಯಾವುದೇ ಹಣದ ಆಸೆ ತೋರಿಸಿ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಯಾರು ಎಷ್ಟು ಹಣವನ್ನು ಹಂಚಿಕೆ ಮಾಡುತ್ತಿದ್ದಾರೆ ಎಂಬುದರ ಮೇಲೆ ಚುನಾವಣೆ ನಡೆಯುತ್ತಿರುವಂತೆ ಕಾಣುತ್ತಿದೆ. ನಾನು ನಿಮಗೆ ಬಜೆಟ್ ನೀಡುತ್ತೇನೆ, ನಾನು ನಿಮಗೆ ಹಣ ನೀಡುತ್ತೇನೆ ಎಂಬ ಭರವಸೆ ನೀಡಿ ಕೇಳಲಾಗುತ್ತಿದೆ. ಇದು ಒಳ್ಳೆಯ ಸಂಪ್ರದಾಯವಲ್ಲ. ಹಣಬಲದ ಮೇಲೆ ಚುನಾವಣೆಗಳನ್ನು ಗೆಲ್ಲುವುದು ಪ್ರಮುಖ ಗುರಿಯಾದರೆ ಈ ವಿಷಯದ ಮಾತನಾಡದಿರುವುದು ಉತ್ತಮ ಎಂದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ರಾಜಕಾರಣ ಬೆರಸಬಾರದು, ಈ ಬಾರಿ ಕೆಲ ಪಕ್ಷಗಳಲ್ಲಿ ಅನೇಕ ಬಣಗಳು ಹುಟ್ಟಿಕೊಂಡಿರುವುದು ಸ್ಪಷ್ಟವಾಗಿದೆ. ರಾಜ್ಯದ ಜನರು ಬುದ್ಧಿವಂತರಾಗಿದ್ದು, ಯಾವ ನಿರ್ಧಾರ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತಾರೆ. ನಾನು ಸ್ಥಳೀಯ ಸಂಸ್ಥೆ ಚುನಾವಣೆಗಳ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ, ಈಗಲೂ ಗಮನ ಹರಿಸುವುದಿಲ್ಲ. ಚುನಾವಣೆಗಳಿಗೆ ಕೆಲವೇ ದಿನ ಬಾಕಿ ಉಳಿದಿದ್ದು, ಫಲಿತಾಂಶ ಏನಾಗುತ್ತದೆಯೋ ನೋಡೋಣ ಎಂದರು.

ಅಜಿತ್​ ಪವಾರ್​ ಹೇಳಿದ್ದೇನು..?

ಮಾಲೆಗಾಂವ್​​ದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಜಿತ್ ಪವಾರ್​, ನೀವು ಎಲ್ಲಾ 18 ಎನ್​ಸಿಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ, ಹಣದ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ. ಆದರೆ ನೀವು ನಮ್ಮ ಅಭ್ಯರ್ಥಿಗಳನ್ನು ತಿರಸ್ಕರಿಸಿದರೆ, ನಾನು ಸಹ ನಿಮ್ಮನ್ನು ತಿರಸ್ಕರಿಸುತ್ತೇನೆ ಎಂದು ಹೇಳಿದರು.
ಡಿಸೆಂಬರ್ 2 ರಂದು ಮಹಾರಾಷ್ಟ್ರದಲ್ಲಿ 246 ಪುರಸಭೆಗಳು ಮತ್ತು 42 ಪಟ್ಟಣ ಮಂಡಳಿಗಳಿಗೆ ಚುನಾವಣೆ ನಡೆಯಲಿದೆ. ಎಲ್ಲಾ ಪಕ್ಷಗಳು ತಮ್ಮ ಎರಡನೇ ಹಂತದ ನಾಯಕರನ್ನು ಕಣಕ್ಕಿಳಿಸಿದ್ದು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಅಜಿತ್ ಪವಾರ್ ಕೂಡ ಪ್ರಚಾರ ನಡೆಸುತ್ತಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net