ಮಹಾರಾಷ್ಟ್ರದಲ್ಲಿ ಭೀಕರ ಘಟನೆ: ಯುವಕನ ಗುಪ್ತಾಂಗ ಕತ್ತರಿಸಿ ರಸ್ತೆಗೆ ಎಸೆದ ದುಷ್ಕರ್ಮಿಗಳು!

Maharashtra Horror
Maharashtra Horror
Published on
ಮಹಾರಾಷ್ಟ್ರ: ದಾರಿಯಲ್ಲಿ ಹೋಗುತ್ತಿದ್ದ 32 ವರ್ಷದ ಯುವಕನೋರ್ವನನ್ನು ಅಪಹರಿಸಿದ ದುಷ್ಕರ್ಮಿಗಳ ಗುಂಪು, ಆತನ ಗುಪ್ತಾಂಗವನ್ನು ಕತ್ತರಿಸಿ ರಸ್ತೆಗೆ ಎಸೆದು ಪರಾರಿಯಾದ ಘಟನೆಯ ಮಹಾರಾಷ್ಟ್ರದ(Maharashtra Horror) ಛತ್ರಪತಿ ಸಂಭಾಜಿನಗರದಲ್ಲಿ (ಔರಂಗಾಬಾದ್) ನಡೆದಿದೆ.

ನಡೆದಿದ್ದೇನು?

ಈ ಭೀಕರ ಘಟನೆಯು ಶನಿವಾರ ರಾತ್ರಿ ಗಂಗಾಪುರ ತಾಲ್ಲೂಕಿನ ಶಿಂಧೇವಾಡಿ ಫಾಟಾ ಎಂಬಲ್ಲಿ ನಡೆದಿದೆ. ಗಂಗಾಪುರ-ಲಾಸೂರು ರಸ್ತೆಯ ಮೂಲಕ ಹಾದು ಹೋಗುತ್ತಿದ್ದ ಯುವಕನನ್ನು ದುಷ್ಕರ್ಮಿಗಳು ಗುರಿ ಮಾಡಿದ್ದಾರೆ. ಮೂಲಗಳ ಪ್ರಕಾರ, ಶನಿವಾರ ಸಂಜೆ 7:30ರ ಸುಮಾರಿಗೆ ಯುವಕ ರಸ್ತೆಯಲ್ಲಿ ಹೋಗುತ್ತಿದ್ದಾಗ, ಮೊದಲೇ ಹೊಂಚು ಹಾಕಿ ಕುಳಿತಿದ್ದ ಅಪರಿಚಿತ ದುಷ್ಕರ್ಮಿಗಳ ತಂಡ ಆತನನ್ನು ಅಡ್ಡಗಟ್ಟಿದೆ. ರಸ್ತೆ ಬದಿಯ ಶಾಲೆಯೊಂದರ ಬಳಿ ಆತನನ್ನು ಬಲವಂತವಾಗಿ ಅಪಹರಿಸಿದ ಕಿರಾತಕರು, ಹತ್ತಿರದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ.

ಅಮಾನವೀಯ ಹಲ್ಲೆ ಮತ್ತು ವಿಕೃತಿ!

ನಿರ್ಜನ ಪ್ರದೇಶದಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಲಾಗಿದೆ. ಅಷ್ಟಕ್ಕೇ ನಿಲ್ಲದ ದುಷ್ಕರ್ಮಿಗಳು, ಅತ್ಯಂತ ಕ್ರೂರವಾಗಿ ಯುವಕನ ಜನನಾಂಗವನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಯುವಕ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಮರಳಿ ರಸ್ತೆ ಬದಿಗೆ ತಂದು ಎಸೆದು, ಕತ್ತಲಲ್ಲಿ ಪರಾರಿಯಾಗಿದ್ದಾರೆ.

ಸಹಾಯಕ್ಕಾಗಿ ಕಣ್ಣೀರಿನ ಕಿರುಚಾಟ!

ರಸ್ತೆ ಬದಿಯಲ್ಲಿ ಬಿದ್ದಿದ್ದ ಯುವಕ ನೋವಿನಿಂದ ಕಿರುಚಾಡುತ್ತಿದ್ದರೂ ಆರಂಭದಲ್ಲಿ ಯಾರ ಗಮನಕ್ಕೂ ಬಂದಿರಲಿಲ್ಲ. ವಿಷಯ ತಿಳಿದ ಯುವಕನ ಸೋದರ ಸಂಬಂಧಿ ಲಕ್ಷ್ಮಣ್ ಅಲಂಜಕರ್ ತಕ್ಷಣ ಸ್ಥಳಕ್ಕೆ ಧಾವಿಸಿ, ರಾತ್ರಿ 8:30ರ ಸುಮಾರಿಗೆ ಗಾಯಾಳುವನ್ನು ಗಂಗಾಪುರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಯುವಕನ ಸ್ಥಿತಿ ಚಿಂತಾಜನಕವಾಗಿದ್ದು, ಆತ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ತನಿಖೆ ಆರಂಭಿಸಿದ ಪೊಲೀಸರು

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಹಲ್ಲೆಯ ಹಿಂದಿರುವ ನೈಜ ಉದ್ದೇಶ ಮತ್ತು ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಈ ಸಂಬಂಧ ಅಧಿಕೃತ ಪ್ರಕರಣ ದಾಖಲಿಸುವ ಪ್ರಕ್ರಿಯೆ ತಡರಾತ್ರಿಯವರೆಗೂ ಮುಂದುವರಿದಿತ್ತು. ಜನನಿಬಿಡ ಪ್ರದೇಶದಿಂದ ವ್ಯಕ್ತಿಯನ್ನು ಅಪಹರಿಸಿ ಇಂತಹ ಕ್ರೂರ ಕೃತ್ಯ ಎಸಗಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net