RCB ಜೆರ್ಸಿ ಎಳೆದು ನಾಮಕರಣ: ಮಹಾರಾಷ್ಟ್ರದ ದಂಪತಿ ತಮ್ಮ ಮಗುವಿಗೆ ಈ ಸ್ಟಾರ್​ ಬ್ಯಾಟರ್​ ಹೆಸರೇ ಇಟ್ಟಿದ್ದು..Virat Kohli fan

Maharashtra Virat Kohli fan
Maharashtra Virat Kohli fan
Published on

ಪ್ರಮುಖ ಮುಖ್ಯಾಂಶಗಳು

  • ವಿರಾಟ್ ಕೊಹ್ಲಿ ಅಭಿಮಾನಿಗಳಾದ ಮಹಾರಾಷ್ಟ್ರದ ದಂಪತಿ
  • ಮಗುವಿನ ನಾಮಕರಣ ಶಾಸ್ತ್ರದ ವೇಳೆ RCB ತಂಡದ ಜೆರ್ಸಿ ಎಳೆದು ನಾಮಕರಣ
  • ಮಗುವಿಗೆ ಅವರ ನೆಚ್ಚಿನ ಬ್ಯಾಟರ್​ ವಿರಾಟ್​ ಎಂದು ಹೆಸರಿಟ್ಟು ಸಂಭ್ರಮ
VIrat Name To Child: ದೇಶದ ವಿವಿಧ ಭಾಗದಲ್ಲಿ ಐಪಿಎಲ್​  ಧಮಾಕ ಒಂದು ಕಡೆಯಾದರೆ, ಮತ್ತೊಂದು ಕಡೆ ಆರ್​ಸಿಬಿ ಮತ್ತು ವಿರಾಟ್​ ಅಭಿಮಾನಿಗಳ ಕ್ರೇಜ್​.  ಕ್ರೀಡಾಪಟುಗಳ ಮೇಲಿನ ತಮ್ಮ ಅಭಿಮಾನವನ್ನು ತೋರ್ಪಡಿಸಿಕೊಳ್ಳಲು ನಾನಾ ರೀತಿಯಲ್ಲಿ ಕ್ರಿಕೆಟ್​ ಪ್ರೇಮಿಗಳು ಪರದಾಡುವ ಘಟನೆಗಳಿವೆ. ಇಂತಹ ಕುರುಡು ಪ್ರೀತಿಯಿಂದ ಕಳೆದ ವರ್ಷ 11 ಮಂದಿ ಮೃತಪಟ್ಟಿದ್ದ ಘಟನೆಯೂ ಇನ್ನು ನೆನಪಲ್ಲಿ ಉಳಿದಿದೆ. ಈ ಮಧ್ಯೆ ಟ್ರೆಂಡಿಂಗ್​ನಲ್ಲಿ ಇರೋದು ಈ ಮಹಾರಾಷ್ಟ್ರದ ದಂಪತಿ. ತಮ್ಮ ಮಗನಿಗೆ  ಭಾರತದ ಸ್ಟಾರ್​ ಬ್ಯಾಟರ್​ ಆದ ವಿರಾಟ್​ ಕೊಹ್ಲಿ ಹೆಸರು ಇಡುವ ಮೂಲಕ ಸದ್ಯ ಚರ್ಚೆಯಲ್ಲಿದ್ದಾರೆ.
ಸಾಮಾನ್ಯವಾಗಿ ನಾಮಕರಣ ಶಾಸ್ತ್ರದಲ್ಲಿ ಮಗುವಿನ ಹೆಸರನ್ನು ಕಿವಿಯಲ್ಲಿ ಹೇಳುವುದು ಅಥವಾ ಫಲಕದ ಮೇಲೆ ಬರೆಯುವುದು, ಅಕ್ಕಿಯಲ್ಲಿ ಬರೆಸುವುದು ರೂಢಿ. ಜ್ಯೋತಿಷಿಗಳು ಕೊಟ್ಟ ಪದದಲ್ಲೇ ಹೆಸರನ್ನು ಮಕ್ಕಳಿಗೆ ಇಡುವುದು ವಾಡಿಕೆ. ಆದರೆ, ಈ ಮಹಾರಾಷ್ಟ್ರದ ದಂಪತಿ ಎಲ್ಲ ಸಂಪ್ರದಾಯವನ್ನು ಗಾಳಿಗೆ ತೂರಿ, ತಮ್ಮ ಕ್ರಿಕೆಟ್ ಪ್ರೇಮವನ್ನು ಮಗುವಿನ ಹೆಸರಿನ ಮೂಲಕ ತೋರಿಸಿದ್ದಾರೆ. 

ಆರ್​​ಸಿಬಿ ಜೆರ್ಸಿ ಎಳೆದು ನಾಮಕರಣ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಅಧಿಕೃತ ಟೀ ಶರ್ಟ್​​ ಅನ್ನು ಎಳೆದು, ಮಗುವಿನ ಹೆಸರನ್ನು ಮುದ್ರಿಸಿ, ಅದನ್ನು ಅತಿಥಿಗಳ ಮುಂದೆ ಅನಾವರಣಗೊಳಿಸಿದರು. ಜೆರ್ಸಿ ಮೇಲೆ ವಿರಾಟ್​ ಎಂದು ಹೆಸರು ಬರೆಸಿ ನಾಮಕರಣ ಮಾಡಿದರು.
 ಜೆರ್ಸಿ ತೆರೆದ ಕೂಡಲೇ ಅಲ್ಲಿ 'VIRAT' ಎಂಬ ಹೆಸರು ರಾರಾಜಿಸಿತು. ಈ ವಿಡಿಯೋ ಈಗ ಇನ್‌ಸ್ಟಾಗ್ರಾಮ್ ಸೇರಿದಂತೆ  ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಆರ್‌ಸಿಬಿ ಅಭಿಮಾನಿಗಳು ಮತ್ತು ಕೊಹ್ಲಿ ಅಭಿಮಾನಿಗಳು ಈ ದಂಪತಿಯ ಸೃಜನಶೀಲತೆಯನ್ನು ಕೊಂಡಾಡುತ್ತಿದ್ದಾರೆ.

ನೆಟ್ಟಿಗರು ಏನಂದ್ರು?

ನಾನು ನೋಡಿದ ಅತ್ಯಂತ ಸುಂದರ ಮತ್ತು  ಬೆಸ್ಟ್​ ನಾಮಕರಣ ಎಂದು ಹೇಳಿದ್ದಾರೆ.  ಮತ್ತೊಬ್ಬರು, ಅವನ ಹೆಸರು ವಿರಾಟ್​ ಆಗಿರಬಹುದು ಆದರೆ ಮುಂದೆ ಆತ ಚೆನ್ನೈ ಸೂಪರ್​​ ಕಿಂಗ್ಸ್​ನ ಪ್ರೇಮಿಯಾಗ್ತಾನೆ ನೋಡ್ತಿರಿ ಎಂದು ಸವಾಲೆಸೆದಿದ್ದಾರೆ.  ಮತ್ತೊಬ್ಬ ಬಳಕೆದಾರರು ನಾನು ನನ್ನ ಮಗುವಿಗೆ ಇದೇ ಹಸರನ್ನು ಇಡುತ್ತೇನೆ ಎಂದು ಬರೆದುಕೊಂಡಿದ್ದಾರೆ. 

ವಿರಾಟ್ ಹೆಸರಿನ ಅರ್ಥವೇನು?

ವಿರಾಟ್​ ಎನ್ನುವ ಹೆಸರು ಶಕ್ತಿ, ಧೈರ್ಯ ಮತ್ತು ಭವ್ಯತೆಯನ್ನು ಸೂಚಿಸುತ್ತದೆ.  ಈ ಹೆಸರು ನಾಮಕರಣ ಮಾಡುವುದು ಉತ್ತಮ ಆಯ್ಕೆ. ಈ ಹೆಸರು ಶೌರ್ಯ ಎನ್ನುವ ಅರ್ಥವನ್ನು ನೀಡುತ್ತದೆ. ಜನಪ್ರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಾರಣದಿಂದ ಈ ಹೆಸರು ಈಗ ಹೆಚ್ಚು ಟ್ರೆಂಡಿಂಗ್‌ನಲ್ಲಿದೆ, (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net