ಮದರಸಾಗಳು ಅನಧಿಕೃತವಾಗಿ ಉಗ್ರರನ್ನು ಉತ್ಪಾದಿಸುತ್ತಿವೆ: ಯುಪಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ವಿವಾದಾತ್ಮಕ ಹೇಳಿಕೆ | Keshav Prasad Maurya

ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ
ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ
Published on
ಲಖನೌ: ಮದರಸಾಗಳು ಎಲ್ಲೇ ಇದ್ದರೂ ಅವು ಅನಧಿಕೃತವಾಗಿ ಉಗ್ರರನ್ನು ಉತ್ಪಾದಿಸುತ್ತಿವೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ(Keshav Prasad Maurya) ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಜಕೀಯ ಕೋಲಾಹಲವನ್ನು ಎಬ್ಬಿಸಿದೆ.
ಈ ಕುರಿತು ಲಖನೌದಲ್ಲಿ ಮಾತನಾಡಿರುವ ಅವರು, ಮದರಸಾ ಬಾಂಗ್ಲಾದೇಶದಲ್ಲಿರಲಿ, ಪಾಕಿಸ್ತಾನದಲ್ಲಿರಲಿ ಅಥವಾ ಭಾರತದಲ್ಲಿರಲಿ, ಮದರಸಾಗಳು ಅನಧಿಕೃತವಾಗಿ ಭಯೋತ್ಪಾದನೆಯನ್ನು ಉತ್ಪಾದಿಸುತ್ತವೆ ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷ ಟೀಕೆ

ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ ವಿರುದ್ಧ ಕಿಡಿಕಾರಿರುವ ಸಮಾಜವಾದಿ ಪಕ್ಷ, ಚುನಾವಣೆ ಸಮೀಪಿಸುತ್ತಿದೆ. ಅವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಉಲ್ಲೇಖಿಸದಿದ್ದರೆ, ತಮ್ಮ ಕಾರ್ಯಸೂಚಿಯನ್ನು ಹೇಗೆ ಅನುಸರಿಸುವುದು ಹೇಗೆ? ಎಂದು ಕಿಡಿಕಾರಿದೆ.
ಈ ಕುರಿತು ಮಾತನಾಡಿರುವ ಸಮಾಜವಾದಿ ಪಕ್ಷದ ಶಾಸಕ ಮೊಹಮ್ಮದ್ ಹಸನ್ ರೂಮಿ, ಡಿಸಿಎಂ ಹೇಳಿರುವುದು ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಒಪ್ಪುವಂತಹ ಮಾತು. ಕೇಂದ್ರ ಸರ್ಕಾರವು ಆ ಎರಡೂ ದೇಶಗಳನ್ನು ಭಾರತದ ಭಾಗವನ್ನಾಗಿ ಮಾಡಬೇಕೆಂದು ಆಗ್ರಹಿಸುತ್ತೇವೆ. ಆಗ ನಾವೆಲ್ಲರೂ ಸೇರಿ ಅಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಲ್ಲಾ ಭಯೋತ್ಪಾದಕ ನೆಲೆಗಳನ್ನು ನಿರ್ಮೂಲನೆ ಮಾಡಬಹುದು ಎಂದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net