ನಟ ವಿಜಯ್‌ಗೆ ಟ್ಯಾಕ್ಸ್ ಪೆನಾಲ್ಟಿ ಬಿಸಿ..ತೆರಿಗೆ ದಂಡ ಪಾವತಿಗೆ ಆದೇಶಿಸಿದ ಮದ್ರಾಸ್ ಹೈಕೋರ್ಟ್ | TVK Vijay

TVK Vijay | ಟಿವಿಕೆ ಮುಖ್ಯಸ್ಥ ವಿಜಯ್
TVK Vijay | ಟಿವಿಕೆ ಮುಖ್ಯಸ್ಥ ವಿಜಯ್
Published on
ಚೆನ್ನೈ: 2015–16ನೇ ಸಾಲಿನಲ್ಲಿ ಆದಾಯ ಬಹಿರಂಗಪಡಿಸದ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ವಿಧಿಸಿದ 1.50 ಕೋಟಿ ರೂ. ದಂಡವನ್ನು ಪ್ರಶ್ನಿಸಿ ನಟ, ಟಿವಿಕೆ ಮುಖ್ಯಸ್ಥ ವಿಜಯ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ನಟ ವಿಜಯ್​ 15 ಕೋಟಿ ರೂ. ಹೆಚ್ಚುವರಿ ಆದಾಯವನ್ನು ಸಂಬಂಧಿತ ಹಣಕಾಸು ವರ್ಷದಲ್ಲಿ ಸರಿಯಾಗಿ ಬಹಿರಂಗಪಡಿಸದ ಪ್ರಕರಣ ಇದಾಗಿದೆ ಎಂದು ಇಲಾಖೆ ತಿಳಿಸಿದ್ದು, 2015 ರ ಸೆಪ್ಟೆಂಬರ್​​ನಲ್ಲಿ ನಡೆಸಿದ ಆದಾಯ ತೆರಿಗೆ ಶೋಧದ ಬಳಿಕ 1.50 ಕೋಟಿ ದಂಡ ವಿಧಿಸಲಾಗಿದೆ.
ದಂಡದ ಆದೇಶದ ವಿರುದ್ಧ ವಿಜಯ್ 2022 ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ತಿಂಗಳು ಅರ್ಜಿಯ ಮೇಲಿನ ಆದೇಶಗಳನ್ನು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಶುಕ್ರವಾರ ತೀರ್ಪು ಈ ನೀಡಿದರು. ತೆರಿಗೆ ಅಧಿಕಾರಿಗಳು ಹೊರಡಿಸಿದ ಶೋಕಾಸ್ ನೋಟಿಸ್ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 263 ರ ಅಡಿಯಲ್ಲಿ ನಿಗದಿಪಡಿಸಿದ ಸಮಯದ ಮಿತಿಯೊಳಗೆ ಇದೆ ಮತ್ತು ಅದರ ಜಾರಿಯಲ್ಲಿ ಯಾವುದೇ ಕಾರ್ಯವಿಧಾನದ ದೌರ್ಬಲ್ಯ ಕಂಡುಬಂದಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಮಿತಿಯನ್ನು ಹೊರತುಪಡಿಸಿ ಇತರ ಆಧಾರದ ಮೇಲೆ ನೋಟಿಸ್ ಮತ್ತು ದಂಡದ ಆದೇಶವನ್ನು ಪ್ರಶ್ನಿಸಲು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT)ಯನ್ನು ಸಂಪರ್ಕಿಸಲು ನ್ಯಾಯಾಲಯವು ವಿಜಯ್‌ಗೆ ಸ್ವಾತಂತ್ರ್ಯವನ್ನು ನೀಡಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net