ಉದಯನಿಧಿ ಸ್ಟಾಲಿನ್ ಗೆಲುವು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಜಾಗೊಳಿಸಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್ | Udhayanidhi Stalin

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಚೆನ್ನೈನ ಚೆಪಾಕ್-ಟ್ರಿಪ್ಲಿಕೇನ್ ಕ್ಷೇತ್ರದಿಂದ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರ ಗೆಲುವನ್ನು ಅಸಿಂಧುಗೊಳಿಸುವಂತೆ ಕೋರಿ, ಸೋತ ಅಭ್ಯರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲು ಶುಕ್ರವಾರ(ನ. 13) ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ.
ಉದಯನಿಧಿ ಸ್ಟಾಲಿನ್
ಉದಯನಿಧಿ ಸ್ಟಾಲಿನ್
Published on: 

ಚೆನ್ನೈ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಚೆನ್ನೈನ ಚೆಪಾಕ್-ಟ್ರಿಪ್ಲಿಕೇನ್ ಕ್ಷೇತ್ರದಿಂದ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರ ಗೆಲುವನ್ನು ಅಸಿಂಧುಗೊಳಿಸುವಂತೆ ಕೋರಿ, ಸೋತ ಅಭ್ಯರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲು ಶುಕ್ರವಾರ(ನ. 13) ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ.

ಉದಯನಿಧಿ ಅವರ ಗೆಲುವನ್ನು ಪ್ರಶ್ನಿಸಿ ಪಕ್ಷೇತರ ಅಭ್ಯರ್ಥಿ ತೇನಿಯ ಪಿ. ಮಿಲಾನಿ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿ ಡಿಎಂಕೆ ನಾಯಕರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರು ವಜಾಗೊಳಿಸಿದರು.

ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಪ್ರತಿ-ಅಫಿಡವಿಟ್ (ಪ್ರತ್ಯುತ್ತರ ಪ್ರಮಾಣಪತ್ರ) ಸಲ್ಲಿಸುವಂತೆ ಮಾಜಿ ಉಪಮುಖ್ಯಮಂತ್ರಿಗೆ ನಿರ್ದೇಶನ ನೀಡಿದ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಡಿಸೆಂಬರ್ 11ಕ್ಕೆ ಮುಂದೂಡಿದ್ದಾರೆ.

Also Read
ನನ್ನ ಜೊತೆ ಚರ್ಚೆಯ ಬಳಿಕ ಮೋದಿ ಪ್ರಧಾನಿಯಾಗಿ ಉಳಿಯಲ್ಲ: ಮತ್ತೆ ರಾಹುಲ್ ಗಾಂಧಿ ಸವಾಲು | Rahul Gandhi
ಉದಯನಿಧಿ ಸ್ಟಾಲಿನ್

ಚೆಪಾಕ್-ಟ್ರಿಪ್ಲಿಕೇನ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಉದಯನಿಧಿ ಸ್ಟಾಲಿನ್, 62,992 ಮತಗಳನ್ನು ಪಡೆದು ಜಯಗಳಿಸಿದ್ದರು. ಅವರ ನಿಕಟ ಪ್ರತಿಸ್ಪರ್ಧಿ ಟಿವಿಕೆ ಪಕ್ಷದ ಡಿ. ಸೆಲ್ವಂ ಅವರು 55,852 ಮತಗಳನ್ನು ಪಡೆದಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಿಲಾನಿ ಅವರು ಕೇವಲ 30 ಮತಗಳನ್ನು ಮಾತ್ರ ಪಡೆದಿದ್ದರು.

ವಿಚಾರಣೆಯ ವೇಳೆ, ಜನತಾ ಪ್ರಾತಿನಿಧ್ಯ ಕಾಯ್ದೆಯ ಅಡಿಯಲ್ಲಿ ನಿಗದಿಪಡಿಸಲಾದ ಕಡ್ಡಾಯ 45 ದಿನಗಳ ಅವಧಿಯ ಬಳಿಕ ಈ ಚುನಾವಣಾ ಅರ್ಜಿಯನ್ನು ಸಲ್ಲಿಸಿರುವುದರಿಂದ, ಇದು ಕಾಲಮಿತಿಯನ್ನು ಮೀರಿದೆ ಎಂದು ಡಿಎಂಕೆ ನಾಯಕರು ವಾದಿಸಿದರು.

ಆದರೆ, ಅರ್ಜಿದಾರರು ತಾವು ನಿಗದಿತ ಕಾಲಮಿತಿಯೊಳಗೇ ಅರ್ಜಿಯನ್ನು ಸಲ್ಲಿಸಿರುವುದಾಗಿಯೂ, ನ್ಯಾಯಾಲಯದ ರಿಜಿಸ್ಟ್ರಿ ಅದನ್ನು ಸ್ವೀಕರಿಸಿರುವ ಕಾರಣ ಈಗ ಅದನ್ನು ವಜಾಗೊಳಿಸಲು ಸಾಧ್ಯವಿಲ್ಲವೆಂದೂ ಪ್ರತಿಪಾದಿಸಿದರು. ಮತ್ತು ಅರ್ಜಿ ವಿಚಾರಣೆ ನಡೆಸಬೇಕೆಂದು ಕೋರಿದರು (ಏಜೆನ್ಸೀಸ್).