ಎಲ್‌ಪಿಜಿ ಬಿಕ್ಕಟ್ಟಿಗೆ ಬ್ರೇಕ್: ಉತ್ಪಾದನೆಯಲ್ಲಿ ಶೇ. 25 ರಷ್ಟು ಏರಿಕೆ, ಆತಂಕ ಬೇಡ ಎಂದ ಕೇಂದ್ರ ಸರ್ಕಾರ! LPG Production

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ದೇಶಾದ್ಯಂತ ವಾಣಿಜ್ಯ ಬಳಕೆಯ ಎಲ್​ಪಿಜಿ ಕೊರತೆಯಿಂದಾಗಿ ಹೋಟೆಲ್​ಗಳು ಮತ್ತು ರೆಸ್ಟೋರೆಂಟ್​ಗಳು ಮುಚ್ಚುವ ಭೀತಿ
  • ಅಡುಗೆ ಅನಿಲ ಉತ್ಪಾದನೆಯಲ್ಲಿ ಶೇ.25 ರಷ್ಟು ಹೆಚ್ಚಳವಾಗಿದ್ದು, ಸಾರ್ವಜನಿಕರು ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ
  • ಭಾರತವು ತನ್ನ ಅಗತ್ಯದ ಎಲ್​ಪಿಜಿಯನ್ನು ಶೇ. 60 ರಷ್ಟು ವಿದೇಶಗಳಿಂದ ಪಡೆಯುತ್ತಿತ್ತು
  • ಇಸ್ರೇಲ್​ ಮತ್ತು ಇರಾನ್​ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿ ಮುಚ್ಚಿರುವುದು ಭಾರತದ ಇಂಧನ ಭದ್ರತೆಗೆ ದೊಡ್ಡ ಸವಾಲಾಗಿದೆ
ನವದೆಹಲಿ: ದೇಶಾದ್ಯಂತ ವಾಣಿಜ್ಯ ಬಳಕೆಯ ಎಲ್​ಪಿಜಿ ಕೊರತೆಯಿಂದಾಗಿ (LPG Production) ಹೋಟೆಲ್​ಗಳು ಮತ್ತು ರೆಸ್ಟೋರೆಂಟ್​ಗಳು ಮುಚ್ಚುವ ಭೀತಿ ಎದುರಿಸುತ್ತಿರುವ ಹಿನ್ನಲೆ,  ಅಡುಗೆ ಅನಿಲ ಉತ್ಪಾದನೆಯಲ್ಲಿ ಶೇ.25 ರಷ್ಟು ಹೆಚ್ಚಳವಾಗಿದ್ದು, ಸಾರ್ವಜನಿಕರು ಅಥವಾ ಉದ್ಯಮಿಗಳು ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. 
ಈ ಕುರಿತು ಮಾತನಾಡಿದ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ, ಭಾರತವು ತನ್ನ ಅಗತ್ಯದ ಎಲ್​ಪಿಜಿಯನ್ನು ಶೇ. 60 ರಷ್ಟು ವಿದೇಶಗಳಿಂದ ಪಡೆಯುತ್ತಿತ್ತು. ಅದರಲ್ಲಿ ಶೇ. 90 ರಷ್ಟು ಹಾರ್ಮುಜ್ ಜಲಸಂಧಿಯ ಮೂಲಕ ಪಡೆಯಲಾಗುತ್ತಿತ್ತು. ಆದರೆ, ಇಸ್ರೇಲ್​ ಮತ್ತು ಇರಾನ್​ ಸಂಘರ್ಷದಿಂದಾಗಿ ಈ ಆಯಕಟ್ಟಿನ ಜಲಸಂಧಿಯನ್ನು ಮುಚ್ಚಿರುವುದು ಭಾರತದ ಇಂಧನ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದರು. 
ಆದಾಗ್ಯೂ, ಅಂದಿನಿಂದ ಸರ್ಕಾರ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ನಿರ್ದೆಶನ ನೀಡಿದ್ದು, ಈಗಾಗಲೇ ಸಂಸ್ಕರಣಾಗಾರಗಳು ಉತ್ತಾದನೆಯನ್ನು ಶೇ. 25 ಕ್ಕೆ ಹೆಚ್ಚಿಸಿವೆ ಎಂದು ಹೇಳಿದರು.
ಎಲ್​ಪಿಜಿ ಬಿಕ್ಕಟ್ಟನ್ನು ಗಂಭೀರವಾಗಿ ಹೆಚ್ಚಿಸುತ್ತಿರುವುದು ಪ್ಯಾನಿಕ್​ ಬುಕಿಂಗ್​ಗಳಿಂದ ಈ ರೀತಿ ಜನರು ಏಕಕಾಲದಲ್ಲಿ ಬುಕಿಂಗ್ ಮಾಡಲು ಮುಗಿಬೀಳುತ್ತಿರುವುದು ಪೂರೈಕೆ ವ್ಯವಸ್ಥೆಯ ಮೇಲೆ ಅನಗತ್ಯ ಒತ್ತಡ ಹೇರುತ್ತಿದೆ. ಇದರಿಂದ ನಿಜವಾದ ಅಗತ್ಯವಿರುವವರಿಗೆ ಸಿಲಿಂಡರ್ ಸಿಗದಂತೆ ಮಾಡುತ್ತಿದೆ ಎಂದು ಹೇಳಿದರು.
ಈ ಅನಿಯಂತ್ರಿತ ತಿರುವುಗಳನ್ನು ತಡೆಗಟ್ಟುವ ಸಲುವಾಗಿ ನಾವು ಒಂದು ಬಾರಿ ವಿತರಣಾ ಕೋಡ್ ಮೂಲಕ ವಿತರಣೆಯನ್ನು ಖಚಿತಪಡಿಸುತ್ತಿದ್ದೇವೆ. ಎಲ್‌ಪಿಜಿ ಸಿಲಿಂಡರ್ ಮರು ಬುಕಿಂಗ್ ಅನ್ನು 21 ರಿಂದ 25 ದಿನಗಳವರೆಗೆ ವಿಸ್ತರಿಸಲಾಗಿದೆ ಎಂದರು.
ಎಲ್‌ಪಿಜಿ ಪರಿಸ್ಥಿತಿಯನ್ನು ನಿಭಾಯಿಸುವುದರ ಜೊತೆಗೆ ಪರ್ಯಾಯ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಒಂದು ಸಮಿತಿಯನ್ನು ಪರಿಚಯಿಸಲಾಗಿದೆ. ಹಾಗಾಗಿ ಕಚ್ಚಾ ತೈಲದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಶರ್ಮಾ ಹೇಳಿದರು.
ದೇಶದ ದೈನಂದಿನ ಅಗತ್ಯವಾದ ತೈಲವು 5.5 ಮಿಲಿಯನ್ ಬ್ಯಾರೆಲ್‌ಗಳನ್ನು ಮೀರುತ್ತಿದೆ. ಆದಾಗ್ಯೂ, ಹಾರ್ಮುಜ್ ಜಲಸಂಧಿಯ ಮೂಲಕ ಬರುವ ತೈಲ ಸ್ಥಗಿತಗೊಂಡಿದ್ದರೂ, ಭಾರತವು ಪ್ರಸ್ತುತ ಜಗತ್ತಿನ 40 ವಿವಿಧ ರಾಷ್ಟ್ರಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ಪೂರೈಕೆ ಸರಪಳಿಯನ್ನು ಸುರಕ್ಷಿತವಾಗಿರಿಸಿದೆ.
ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದಂತೆ, ಸೌದಿ ಅರೇಬಿಯಾದ ಎಲ್‌ಪಿಜಿ ಬೆಲೆಗಳು ಶೇ. 33 ರಷ್ಟು ಹೆಚ್ಚಾಗಿದೆ. ಇದು ಜಾಗತಿಕ ಸವಾಲು, ಆದ್ದರಿಂದ ಅಗತ್ಯ ವಲಯಗಳಿಗೆ ಆದ್ಯತೆ ನೀಡಲಾಗುತ್ತದೆ" ಎಂದು ಶರ್ಮಾ ತಿಳಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net