ಎಲ್‌ಪಿಜಿ ಇ-ಕೆವೈಸಿ ಗಡುವು ವಿಸ್ತರಣೆ: ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದಿದ್ದರೆ ಏನಾಗುತ್ತದೆ?..LPG e-KYC Deadline

LPG e-KYC Deadline
LPG e-KYC Deadline
Published on

ಪ್ರಮುಖ ಮುಖ್ಯಾಂಶಗಳು

  • ಎಲ್‌ಪಿಜಿ ಇ-ಕೆವೈಸಿ ಗಡುವು ಆಗಸ್ಟ್ 31 ರವರೆಗೆ ವಿಸ್ತರಣೆ
  • ನಕಲಿ ಮತ್ತು ವಂಚನೆಯ ಎಲ್‌ಪಿಜಿ ಸಂಪರ್ಕಗಳನ್ನು ಪತ್ತೆಹಚ್ಚಲು ಸರ್ಕಾರದ ಮಹತ್ವದ ಹೆಜ್ಜೆ.
  • ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಸಿಲಿಂಡರ್ ಬುಕ್ ಮಾಡುವಾಗ ಸಮಸ್ಯೆ ಹಾಗೂ ಸಬ್ಸಿಡಿಗೆ ಕತ್ತರಿ ಬೀಳುವ ಸಾಧ್ಯತೆ.
LPG e-KYC Deadline: ನಕಲಿ ಮತ್ತು ವಂಚನೆಯ ಎಲ್‌ಪಿಜಿ ಸಂಪರ್ಕಗಳನ್ನು ಗುರುತಿಸಿ ತೆಗೆದು ಹಾಕುವ ಸಲುವಾಗಿ ಕೇಂದ್ರ ಸರ್ಕಾರವು ಇ-ಕೆವೈಸಿ ಕಡ್ಡಾಯಗೊಳಿಸಿದೆ. ಈ ಹಿನ್ನೆಲೆ ಸದ್ಯ ಹೊಸ ಎಲ್‌ಪಿಜಿ ಸಂಪರ್ಕಗಳ ವಿತರಣೆಯು  ಸ್ಥಗಿತಗಿಂಡಿದ್ದು, ಲಭ್ಯತೆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇ-ಕೆವೈಸಿ ಮಾಡಿಸಲು  ಗಡುವು ನೀಡಿದ್ದು, ಯಾವ ದಿನದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು,  ಇಕೆವೈಸಿ ಮಾಡಿಸಿಕೊಳ್ಳದಿದ್ದರೇ ಏನಾಗುತ್ತೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಲವು ವರ್ಷಗಳಿಂದ ಲಕ್ಷಾಂತರ ಗ್ರಾಹಕರು ಎಲ್‌ಪಿಜಿ ಸಂಪರ್ಕಗಳನ್ನು ಬಳಸುತ್ತಿದ್ದಾರೆ. ಆದರೆ, ನಕಲಿ ದಾಖಲೆಗಳನ್ನು ಬಳಸಿ ಅಥವಾ ಇತರೆ ವ್ಯಕ್ತಿಗಳ ಹೆಸರಿನಲ್ಲಿ ಸಂಪರ್ಕ ಪಡೆದವರು ಇ-ಕೆವೈಸಿ ಪೂರ್ಣಗೊಳಿಸುತ್ತಿಲ್ಲ. ಈ ಪ್ರಕ್ರಿಯೆಯು ಅಂತಹ ನಕಲಿ ಅಥವಾ ವಂಚನೆಯ ಸಂಪರ್ಕಗಳನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.

ಇ-ಕೆವೈಸಿ ಗಡುವು ವಿಸ್ತರಣೆ

ಎಲ್‌ಪಿಜಿ ಗ್ರಾಹಕರಿಗೆ ಆರಂಭದಲ್ಲಿ ಆಗಸ್ಟ್ 23 ರವರೆಗೆ ಇ-ಕೆವೈಸಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಈಗ ಸರ್ಕಾರವು ಗಡುವನ್ನು ಮತ್ತೊಮ್ಮೆ ವಿಸ್ತರಿಸಿದ್ದು, ಗ್ರಾಹಕರು ಆಗಸ್ಟ್ 31 ರೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಇಂಡಿಯನ್ ಆಯಿಲ್ , ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್ ಎಂಬ ಮೂರು ತೈಲ ಮಾರುಕಟ್ಟೆ ಕಂಪನಿಗಳು ದೇಶೀಯ ದರದಲ್ಲಿ ಎಲ್‌ಪಿಜಿ ರಿಫಿಲ್ ಪಡೆಯುವುದನ್ನು ಮುಂದುವರಿಸಲು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಗ್ರಾಹಕರನ್ನು ಒತ್ತಾಯಿಸುತ್ತಿವೆ.

ಇ-ಕೆವೈಸಿ  ಮಾಡಿಸದಿದ್ದರೆ ಏನಾಗುತ್ತದೆ?

ಗ್ರಾಹಕರು ಇ-ಕೆವೈಸಿ ಮಾಡಿಸುವಂತೆ ಕೇಂದ್ರ ಸರ್ಕಾರ

 ಪ್ರೋತ್ಸಾಹಿಸುತ್ತಿದೆ. ಇದನ್ನು ಪೂರ್ಣಗೊಳಿಸದಿದ್ದರೂ ತಕ್ಷಣವೇ ಸಂಪರ್ಕ ಕಡಿತಗೊಳ್ಳುವುದಿಲ್ಲವಾದರೂ, ಗ್ರಾಹಕರು ಸಿಲಿಂಡರ್ ಬುಕ್ ಮಾಡುವಾಗ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ಅವರ ಎಲ್‌ಪಿಜಿ ಸಬ್ಸಿಡಿಯ ಮೇಲೂ ಪರಿಣಾಮ ಬೀರಬಹುದು. ಇ-ಕೆವೈಸಿ ಪೂರ್ಣಗೊಂಡ ನಂತರ ಬಾಕಿ ಉಳಿದಿರುವ ಸೇವೆಗಳು ಮರುಪ್ರಾರಂಭಗೊಳ್ಳುತ್ತವೆ.

ಇ-ಕೆವೈಸಿ ಮಾಡಿಸೋದು ಹೇಗೆ?
 ನಿಮ್ಮ ಮೊಬೈಲ್ ಮೂಲಕವೇ ಕೇವಲ 5 ನಿಮಿಷಗಳಲ್ಲಿ ಮನೆಯಲ್ಲೇ ಕುಳಿತು ಉಚಿತವಾಗಿ ಮಾಡಬಹುದು. ನೀವು ಇಂಡೇನ್, ಎಚ್‌ಪಿ, ಅಥವಾ ಭಾರತ್ ಗ್ಯಾಸ್ ಯಾವುದೇ ಗ್ರಾಹಕರಾಗಿದ್ದರೂ ಇ-ಕೆವೈಸಿ ಮಾಡಿಸಬೇಕು ಎಂದು ಇದ್ದರೆ ಈ ಮಾಹಿತಿ ಅನುಸರಿಸಿ.

ಮೊಬೈಲ್ ಆಪ್ ಮೂಲಕ ಆನ್‌ಲೈನ್‌ನಲ್ಲಿ ಇ-ಕೆವೈಸಿ ಮಾಡುವ ವಿಧಾನ

ಅಗತ್ಯವಿರುವ ಆಪ್‌ಗಳನ್ನು ಡೌನ್‌ಲೋಡ್ ಮಾಡಿಮೊದಲು ನಿಮ್ಮ ಮೊಬೈಲ್‌ನ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ಗೆ ಹೋಗಿ Aadhaar Face RD App ಇದು ನಿಮ್ಮ ಮುಖದ ಗುರುತು ಪತ್ತೆ ಹಚ್ಚಲು ಬ್ಯಾಕ್‌ಗ್ರೌಂಡ್‌ನಲ್ಲಿ ಕೆಲಸ ಮಾಡುತ್ತದೆ, ಇದನ್ನು ನೇರವಾಗಿ ಓಪನ್ ಮಾಡಲು ಸಾಧ್ಯವಿಲ್ಲ. ನಿಮ್ಮ ಗ್ಯಾಸ್ ಕಂಪನಿಗೆ ಸಂಬಂಧಿಸಿದ ಅಧಿಕೃತ ಆಪ್ ಅನ್ನು ಡೌನ್​ ಮಾಡಿಕೊಳ್ಳಿ| ಈಗ ನಿಮ್ಮ ಗ್ಯಾಸ್​ ಏಜೆನ್ಸಿ  ಕಂಪನಿಯ ಆಪ್​ನಲ್ಲಿ ರಿಜಿಸ್ಟರ್ ಮತ್ತು ಲಾಗಿನ್ ಆಗಿ.
ನಿಮ್ಮ ಗ್ಯಾಸ್ ಕನೆಕ್ಷನ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗಿನ್ ಆಗಿ..ಅಗತ್ಯವಿದ್ದರೆ ನಿಮ್ಮ 16 ಅಥವಾ 17 ಅಂಕಿಗಳ LPG ID ಯನ್ನು ನೀಡಿ ನಿಮ್ಮ ಪ್ರೊಫೈಲ್ ಪೂರ್ಣಗೊಳಿಸಿ. ಇ-ಕೆವೈಸಿ  ಆಯ್ಕೆ ಮಾಡಿಆಪ್‌ನ ಮೆನು ಅಥವಾ ಪ್ರೊಫೈಲ್ ಸೆಕ್ಷನ್‌ಗೆ ಹೋಗಿ.ಅಲ್ಲಿ "LPG" ಅಥವಾ "e-KYC" / "Re-KYC" ಎಂಬ ಆಪ್ಷನ್ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.ನಿಯಮ ಮತ್ತು ಷರತ್ತುಗಳ ಬಾಕ್ಸ್ ಮೇಲೆ ಟಿಕ್ ಮಾರ್ಕ್ ,ಮಾಡಿ. ಈಗ ನಿಮ್ಮ ಮುಖ ಸ್ಕ್ಯಾನ್ ಮಾಡಿ ಮುಖದ ದೃಢೀಕರಣ ಯಶಸ್ವಿಯಾದ ನಂತರ ನಿಮ್ಮ ವಿವರಗಳು ಸ್ಕ್ರೀನ್ ಮೇಲೆ ಕಾಣಿಸುತ್ತವೆ. ಕೊನೆಯದಾಗಿ ಸಬ್​ಮಿಟ್​ ಕೊಡಿ.(ಏಜೆನ್ಸೀಸ್).

Related Stories

Boiled Sambar
35 ರಲ್ಲಿ 31 ಕೌನ್ಸಿಲರ್‌ಗಳು ಪಕ್ಷೇತರ, ಕೋರ್ಟ್ ಮೊರೆ, ರಾತ್ರಿ 10 ಗಂಟೆಯವರೆಗೂ ಮತದಾನ!...ಥ್ರಿಲ್ಲರ್ ಸಿನಿಮಾವನ್ನೇ ಮೀರಿಸುವಂತಿದೆ ರಾಜಸ್ಥಾನದ ಚುನಾವಣೆ | Tijara Election
Delhi riots case: Sharjeel Imam granted interim bail to attend a wedding ceremony.
Waris Pathan
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net