ಪ್ರೇಯಸಿ ಫೋನ್ ಎತ್ತದ್ದಕ್ಕೆ ಲೈಟ್ ಕಂಬ ಏರಿದ ಲವರ್ ಬಾಯ್ |Lover boy climb a light pole

ಲೈಟ್ ಕಂಬ ಹತ್ತಿದ ಯುವಕ
ಲೈಟ್ ಕಂಬ ಹತ್ತಿದ ಯುವಕ
Published on

ಪ್ರಮುಖ ಮುಖ್ಯಾಂಶಗಳು

  • ಪ್ರೇಯಸಿ ಫೋನ್‌ ಕಾಲ್​ ಎತ್ತಲಿಲ್ಲ ಎಂದು ಲೈಟ್‌ ಕಂಬ ಏರಿದ ಯುವಕ
  • ಅವಳು ಮಾತನಾಡುವವರೆಗೂ ಕೆಳಗಿಳಿಯಲ್ಲ; ಲೈಟ್‌ ಕಂಬದ ಮೇಲೆ ಕುಳಿತು ಹೈಡ್ರಾಮಾ
  • ಲೈಟ್‌ ಕಂಬ ಏರಿದ ಪಾಗಲ್​ ಪ್ರೇಮಿನ್ನು ಕೆಳಗಿಳಿಸಿದ ಪೊಲೀಸರು
Lover boy climb a light pole: ಪ್ರೇಯಸಿ ಫೋನ್ ಕಾಲ್​ ರಿಸೀವ್​ ಮಾಡದ ಕಾರಣಕ್ಕೆ ಯುವಕನೊಬ್ಬ ಲೈಟ್​ ಕಂಬ ಏರಿ ಹೈಡ್ರಾಮಾ ನಡೆಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಕಂಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ವೈರಲ್ ಆಗಿರುವ ವಿಡಿಯೋ ಪ್ರಕಾರ, ಯುವಕ ತಾನು ಲವ್​ ಮಾಡಿದ ಹುಡುಗಿಯನ್ನು ಮದುವೆಯಾಗಬೇಕು ಅಂದುಕೊಂಡಿದ್ದ. ಆದರೆ ಯುವತಿ ಆತನೊಂದಿಗೆ ಬ್ರೇಕ್​ಅಪ್​ ಮಾಡಿಕೊಳ್ಳಲು ನಿರ್ಧರಿಸಿದ್ದಳಂತೆ. ಇದರಿಂದ ಬೇಸರಗೊಂಡ ಯುವಕ, ಅವಳು ಇಲ್ಲಿಗೆ ಬಂದು ಮಾತಾಡಬೇಕು ಅಥವಾ ನನ್ನ ಫೋನ್ ಕಾಲ್​ ರಿಸೀವ್ ಮಾಡಬೇಕು ಇಲ್ಲದಿದ್ದರೆ ನಾನು ಕೆಳಗೆ ಇಳಿಯಲ್ಲ ಎಂದು ಲೈಟ್​ ಕಂಬ ಏರಿ ಕುಳಿತಿದ್ದಾನೆ.

ಪಾಗಲ್​ ಪ್ರೇಮಿನ್ನು ಕೆಳಗಿಳಿಸಿ ಖಾಕಿ

ಇನ್ನು

ಸ್ಥಳೀಯರು

ಠಾಣೆ

ಗೆ ವಿಷಯ ತಿಳಿಸಿದ ಬಳಿಕ, ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಬಂದು ಲಿಫ್ಟ್​ ಯಂತ್ರದ ಸಹಾಯದಿಂದ ಕಡೆಗೂ ಪಾಗಲ್​ ಪ್ರೇಮಿನ್ನು ಕೆಳಗಿಳಿಸಿದ್ದಾರೆ. ಬಳಿಕ ಖಾಕಿ ಆತನನ್ನು ವಶಕ್ಕೆ ಪಡೆದು ಬುದ್ಧಿ ಹೇಳಿದ್ದಾರೆ.

ಕಂಬದ ಮೇಲೆಯೇ ಕುಳಿತು ಗೆಳತಿಗೆ ​ಕಾಲ್​

ಈ ವಿಡಿಯೋದಲ್ಲಿ ಕಂಬದ ಮೇಲೆಯೇ ಕುಳಿತು ಯುವಕ ಫೋನ್​ ಕಾಲ್​ ಮಾಡುತ್ತಿರುವ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಾಸ್ಯಮಯವಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದು, ಕೆಲವರು ಹುಡುಗಿಗಾಗಿ ಇಂತಹ ಸರ್ಕಸ್​ ಮಾಡಬೇಡಿ, ಜೀವ ಹೋದರೆ ವಾಪಸ್​ ಬರಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ.(ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net