ಫೋನ್ ನಂಬರ್ ಬ್ಲಾಕ್ ಮಾಡಿದ ಲವರ್; ಮನೆಗೆ ನುಗ್ಗಿ ಚಾಕು ಇರಿದು ಕೊಂದ ಪ್ರಿಯತಮೆ | Lover

ಮೃತ ಕಾಮತ್ ಪ್ರಸಾದ್ ಸೂರ್ಯವಂಶಿ ಮತ್ತು ರೋಶ್ನಿ
ಮೃತ ಕಾಮತ್ ಪ್ರಸಾದ್ ಸೂರ್ಯವಂಶಿ ಮತ್ತು ರೋಶ್ನಿ
Published on

ಪ್ರಮುಖ ಮುಖ್ಯಾಂಶಗಳು

  • ಫೋನ್ ಕರೆ ಮತ್ತು ವಾಟ್ಸಾಪ್ ಮೆಸೇಜ್ ಬ್ಲಾಕ್ ಮಾಡಿದ್ದಕ್ಕೆ ಕೊಲೆ
  • ಇನ್ನೊರ್ವ ಯುವತಿ ಹಿಂದೆ ಬಿದ್ದಿದ್ದಾನೆ ಎಂಬ ಅನುಮಾನದಿಂದ ಕೊಲೆ
  • ಆರು ತಿಂಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಪರಿಚಯವಾಗಿ ಇಬ್ಬರು
ಬಿಲಾಸ್ಪುರ್: ಛತ್ತೀಸ್​ಗಢದ ಬಿಲಾಸ್ಪುರದಲ್ಲಿ ಫೋನ್ ಕರೆ ಮತ್ತು ವಾಟ್ಸಾಪ್ ಮೆಸೇಜ್ ಬ್ಲಾಕ್ ಮಾಡಿದ ಹಿನ್ನೆಲೆ ಪ್ರಿಯತಮೆಯೊಬ್ಬಳು(Lover) ತನ್ನ ಗೆಳೆಯನ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಆತನನ್ನು ಕೊಲೆ ಮಾಡಿದ ಘಟನೆ ಮಂಗಳವಾರ(ಫೆ. 03) ಮಧ್ಯಾಹ್ನ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಕಾಮತ್ ಪ್ರಸಾದ್ ಸೂರ್ಯವಂಶಿ(25) ಕೊಲೆಯಾದ ಪ್ರಿಯಕರ. ಸ್ಥಳೀಯ ಹೋಟೆಲ್​ವೊಂದರಲ್ಲಿ ಕೆಲಸ ಮಾಡ್ತಿದ್ದನು. ರೋಶ್ನಿ ಸೂರ್ಯವಂಶಿ ಕೊಲೆ ಮಾಡಿದ ಪ್ರಿಯತಮೆ. ಇಬ್ಬರು ಆರು ತಿಂಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಪರಿಚಯವಾಗಿ ಬಳಿಕ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು ಎನ್ನಲಾಗಿದೆ.
ಕಳೆದ ಎರಡ್ಮೂರು ದಿನಗಳ ಹಿಂದೆ ಕಾಮತ್ ಪ್ರಸಾದ್, ರೋಶ್ನಿ ಜೊತೆ ಮಾತನಾಡುವುದನ್ನು ಬಿಟ್ಟಿದ್ದು, ಆಕೆಯ ಫೋನ್ ನಂಬರ್ ಅನ್ನು ಬ್ಲಾಕ್ ಮಾಡಿದ್ದು, ವಾಟ್ಸಾಪ್​ನಲ್ಲೂ ಮೆಸೇಜ್ ಅನ್ನು ನಿರ್ಬಂಧಿಸಿದ್ದಾನೆ. ಇದರಿಂದ ಕಾಮತ್ ಇನ್ನೊಬ್ಬ ಹುಡುಗಿಯಿಂದ ಬಿದ್ದಿದ್ದಾನೆ ಎಂದು ಕೋಪಗೊಂಡ ರೋಶ್ನಿ, ಚಾಕು ಹಿಡಿದುಕೊಂಡು ಕಾಮತ್ ಮನೆಗೆ ನುಗ್ಗಿದ್ದಾಳೆ.
ಕಾಮತ್ ಬಾಗಿಲು ತೆರೆದ ತಕ್ಷಣ ರೋಶ್ನಿ ಅವನ ಮೊಬೈಲ್ ಕೇಳಿದ್ದು, ಆತನು ಕೊಡಲು ನಿರಾಕರಿಸಿದ್ದಾನೆ. ಆಗ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ರೋಶ್ನಿ ಸಿಟ್ಟಿನಿಂದ ಚಾಕುವಿನಿಂದ ಕಾಮತ್ ಎದೆಗೆ ಇರಿದಿದ್ದಾಳೆ. ತಕ್ಷಣ ಚೀರಿಕೊಂಡಿರುವ ಧ್ವನಿ ಕೇಳಿ ಕಾಮತ್ ರೂಮ್​ಮೇಟ್ ಹೊರ ಬಂದು ನೋಡಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ದುರಾದೃಷ್ಟವಶಾತ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಕಾಮತ್ ಸಾವನ್ನಪ್ಪಿದ್ದಾನೆ.
ಈ ಕುರಿತು ಮಾತನಾಡಿರುವ ಪೊಲೀಸ್ ಅಧಿಕಾರಿ ಸುಮ್ಮತ್ ಸಾಹು, ಯುವತಿ ಕಾಮತ್ ಕೋಣೆಗೆ ಬಂದು ಆತನ ಫೋನ್ ಕೊಡುವಂತೆ ಕೇಳಿಕೊಂಡಿದ್ದಾಳೆ. ಆದರೆ ಆತ ಫೋನ್ ಕೊಡದಿದ್ದಕ್ಕೆ ಗಲಾಟೆ ನಡೆದಿದೆ. ಈ ವೇಳೆ ಎದೆಗೆ ಚಾಕು ಇರಿದಿದ್ದಾಳೆ. ಮಹಿಳೆಯನ್ನು ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net