ಕಾಂಗ್ರೆಸ್​​ ಕಚೇರಿಯಲ್ಲಿ 72 ದುಬಾರಿ ನಲ್ಲಿಗಳ ಕಳ್ಳತನ; ಧೂಳಿನ ಮೇಲೆ I LOVE YOU ಎಂದು ಬರೆದು ಖತರ್ನಾಕ್​ ಖದೀಮ ಪರಾರಿ

Chhattisgarh
Chhattisgarh
Published on

ಪ್ರಮುಖ ಮುಖ್ಯಾಂಶಗಳು

  • ಛತ್ತೀಸಗಢದ ಕಾಂಗ್ರೆಸ್​ ಕಚೇರಿಯಲ್ಲಿ 72 ದುಬಾರಿ ನಳ ಕಳ್ಳತನ
  • ನಲ್ಲಿ ಕಳ್ಳತನ ಮಾಡಿ ಐ ಲವ್​ಯು ಎಂದು ಬರೆದ ಖದೀಮರು
  • ಪೊಲೀಸ್​​ರ ಕಾರ್ಯಾಚರಣೆ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಬೇಸರ
ಛತ್ತೀಸ್​ಗಢ: ಕಾಂಗ್ರೆಸ್​ ಕಚೇರಿಯಲ್ಲಿ ಡಜ್​ನಗಟ್ಟಲೆಯಿದ್ದ ನಲ್ಲಿಗಳನ್ನು ಕಳುವು ಮಾಡುವುದಲ್ಲದೇ, ಅಲ್ಲಿದ್ದ ಧೂಳಿನ ಮೇಲೆ ಐ ಲವ್​ ಯು ಎಂದು ಬರೆದಿಟ್ಟ ಫೋಟೋಗಳು, ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸದ್ಯ ಹರಿದಾಡುತ್ತಿದೆ.
ಸುರ್ಗುಜಾ ಜಿಲ್ಲೆಯ ಅಂಬಿಕಾಪುರದ ರಾಜೀವ್​ ಭವನದಲ್ಲಿದ್ದ 73 ನಲ್ಲಿಗಳನ್ನು ಕಳ್ಳರು ಕದ್ದಿದ್ದಾರೆ ಎಂದು ಕಾಂಗ್ರೆಸ್​​ನ ಹಿರಿಯ ನಾಯಕ ಬಾಲಕೃಷ್ಣ ಪಾಠಕ್ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ನಂತರ, ಅಲ್ಲಿನ ಸ್ಥಿತಿ ಬಗ್ಗೆ ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ.

ಪೈಪ್​ ಬಿಟ್ಟು, ನಲ್ಲಿ ಕದ್ದ ಖದೀಮರು

ಪಕ್ಷದ ಕಚೇರಿ ಹಲವಾರು ದಿನದಿಂದ ತೆರೆಯದ ಕಾರಣಕ್ಕೋ ಅಥವಾ ಸ್ವಚ್ಛ ಮಾಡದ ಕಾರಣಕ್ಕೋ ನೆಲದ ಮೇಲೆ ಧೂಳು ತುಂಬಿತ್ತು ಈ ವೇಳೆ ಕಳ್ಳತನಕ್ಕೆ ಬಂದವನು, ಕಚೇರಿಯ ವಾಶ್​ ರೂಂ ಬೇಸಿನ್​ಗಳು, ಫ್ಲಶ್​ ಟ್ಯಾಂಕ್​​ಗಳಿಗೆ ಅಳವಡಿಸಿದ್ದ ನಲ್ಲಿ ಕಳ್ಳತನ ಮಾಡಿ ಪೈಪ್​​ಗಳನ್ನು ಅಲ್ಲಲ್ಲೇ ಬಿಸಾಡಿ ಹೋಗಿದ್ದ ಎನ್ನಲಾಗಿದೆ.
ಮದ್ಯ ವ್ಯಸನಿಗಳದ್ದೇ ಕೆಲಸ ಇರ್ಬೇಕು
ಕಳ್ಳತನದ ಹಿಂದೆ ಮಾದಕ ವ್ಯಸನಿಗಳು ಅಥವಾ ನಮ್ಮ ವಿರೋಧ ಪಕ್ಷಗಳದ್ದೇ ಕೈವಾಡವಿರಬೇಕು ಎಂದು ಜಿಲ್ಲಾ ಕಾಂಗ್ರೆಸ್​ ಮುಖ್ಯಸ್ಥ ಬಾಲಕೃಷ್ಣ ಪಾಠಕ್ ಶಂಕಿಸಿದ್ದಾರೆ. ರಾಜೀವ್​ ಭವನದಲ್ಲಿ ಇದು ಮೂರನೇ ಬಾರಿಗೆ ನಡೆಯುತ್ತಿರುವ ಕಳ್ಳತನವಾಗಿದೆ. 73 ನಳಗಳನ್ನು ಕಳ್ಳತನ ಮಾಡಿರುವುದು ಕಂಡರೆ ಮದ್ಯಪಾನಿಗಳು ದುಡ್ಡಿಗಾಗಿ ಹೀಗೆ ಮಾಡಿದ್ದಾರೆ ಎನಿಸುತ್ತಿದೆ.
ವಿಐಪಿ ವಲಯದಲ್ಲೇ ಇಷ್ಟೊಂದು ಧೈರ್ಯವಾಗಿ ಕಳ್ಳರು ಗಂಟೆಗಟ್ಟಲೆ ಇದ್ದು 72 ನಲ್ಲಿಗಳನ್ನು ಕದ್ದಿದ್ದಾರೆ. ಅಲ್ಲದೆ ನೆಲದ ಮೇಲೆ ಸಂದೇಶ ಬರೆದಿಟ್ಟು ಹೋಗಿರುವುದು ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಯನ್ನು ಬಹಿರಂಗವಾಗಿ ಅಣಕಿಸಿದಂತಿದೆ. ನಗರದಲ್ಲಿ ಡ್ರಗ್ಸ್ ವ್ಯಸನಿಗಳು ಹಾಗೂ ಸಮಾಜವಿರೋಧಿ ಶಕ್ತಿಗಳು ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಬಾಲಕೃಷ್ಣ ಪಾಠಕ್ ​ ಹೇಳಿದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net