ಜನವರಿ 9 ರಂದು ಸಂತ್ರಸ್ತ ವೈದ್ಯೆ ಕಾಲೇಜಿನಿಂದ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದಾಗ, ಆರೋಪಿಗಳು ಉದ್ದೇಶಪೂರ್ವಕವಾಗಿ ಬೈಕ್‌ನಿಂದ ಡಿಕ್ಕಿ ಹೊಡೆದಿದ್ದಾರೆ. ಅಪಘಾತವಾಗಿ ಕೆಳಗೆ ಬಿದ್ದ ವೈದ್ಯೆಗೆ ಸಹಾಯ ಮಾಡುವಂತೆ ನಟಿಸಿ ವಸುಂಧರಾ ಅಲ್ಲಿಗೆ ಬಂದಿದ್ದಾಳೆ. ಗಾಯಾಳುವನ್ನು ಆಟೋರಿಕ್ಷಾಕ್ಕೆ ಹತ್ತಿಸುವ ನೆಪದಲ್ಲಿ, ಮುಂಚಿತವಾಗಿ ಸಿದ್ಧಪಡಿಸಿಕೊಂಡಿದ್ದ ಎಚ್‌ಐವಿ ವೈರಸ್ ಹೊಂದಿದ್ದ ಇಂಜೆಕ್ಷನ್ ಅನ್ನು ಆಕೆಗೆ ಚುಚ್ಚಿದ್ದಾಳೆ. ವೈದ್ಯೆ ಕಿರುಚಿಕೊಂಡಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.