“ಮೃತ ಅಮ್ಮನ ಎದುರು ಪ್ರತಿಜ್ಞೆ ಮಾಡಿ 160ರಿಂದ 85 KG ತೂಕ ಇಳಿದೆ… ಇದು ನನ್ನ ಪುನರ್ಜನ್ಮ!” 22ರ ಯುವಕನ ಕಣ್ಣೀರಿನ ಕಥೆ..

ತನ್ನ ತಾಯಿಯೊಂದಿಗೆ ಸೋಭಿಕ್
ತನ್ನ ತಾಯಿಯೊಂದಿಗೆ ಸೋಭಿಕ್
Published on

ಪ್ರಮುಖ ಮುಖ್ಯಾಂಶಗಳು

  • ಮೃತ ತಾಯಿಯ ಮುಂದೆ ಕಣ್ಣೀರಲ್ಲಿ ಒಡೆದ ಪ್ರತಿಜ್ಞೆ – 75 ಕೆಜಿ ತೂಕ ಇಳಿಸಿ ಹೊಸ ಜನ್ಮ ತೊಟ್ಟ 22ರ ಯುವಕ!
  • ನನ್ನ ತಾಯಿ ಕೊನೆ ಆಸೆಗಳಲ್ಲಿ ನನ್ನ ತೂಕ ಇಳಿಸಿಕೊಂಡಿ ಫಿಟ್​ ಆಗಿ ನೋಡೋದು ಒಂದು ಕನಸಾಗಿತ್ತು
  • ಸೋಭಿಕ್ ಯುವಕನ ಪೋಸ್ಟ್​ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್​ ಆಗಿದೆ
ಬೆಂಗಳೂರು:ತೂಕ ಇಳಿಸಿಕೊಳ್ಳುವುದು ಎಂದಿಗೂ ಸುಲಭದ ಕೆಲಸವಲ್ಲ, ಇದಕ್ಕೆ ತಾಳ್ಮೆ, ಶಿಸ್ತು ಮತ್ತು ಸಾಕಷ್ಟು ಪ್ರಯತ್ನ ಬೇಕಾಗುತ್ತದೆ. ಅಲ್ಲದೇ, ಆರೋಗ್ಯಕಾರ ಆಹಾರದ ಪಾತ್ರ ಪ್ರಮುಖವಹಿಸುತ್ತದೆ. ಇಷ್ಟೆಲ್ಲಾ ಹೊರತಾಗಿಯೂ ದೈಹಿಕ ನೋವಿನಿಂದ ಕೂಡಿರುತ್ತದೆ. ಆದರೆ, ಆತ್ಮ ವಿಶ್ವಾಸ ಇದ್ರೆ ಬೆಟ್ಟವನ್ನು ಕರಗಿಸಬಹುದು. ಒಂದು ಕಾಲದಲ್ಲಿ 160 ಕೆ.ಜಿ ತೂಕವುಳ್ಳ 22ರ ಹುಡುಗ ಇದೀಗ 85 ಕೆ.ಜಿ.ತೂಕ ಇಳಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾನೆ.
ಹೌದು, 22ರ ಸೋಭಿಕ್ ಎನ್ನುವ ಹುಡುಗ, ತನ್ನ ದೇಹದ ಭಾರಕ್ಕಿಂತ ತನ್ನ ಹೃದಯ ಹೆಚ್ಚಿನ ಭಾರವನ್ನು ಹೊತ್ತುಕೊಂಡಿತ್ತು ಎಂಬುದು ಆತನ ಮಾತುಗಳಲ್ಲೇ ತಿಳಿಯುತ್ತದೆ. ತೂಕ ಇಳಿಸುವ ಪ್ರಯಾಣದ ಬಗ್ಗೆ ತನ್ನ ಇನ್ಸ್ಟಾಗ್ರಾಮ್​ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ ಸೋಭಿಕ್​. ಇದೀಗ ಈ ಪೋಸ್ಟ್​ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್​ ಆಗುತ್ತಿದೆ.

ಸೋಭಿಕ್ ಹೇಳಿದ್ದೇನು..?

ಸೋಭಿಕ್ ಅನಾರೋಗ್ಯಕರ ಆಹಾರ ಪದ್ಧತಿಯೊಂದಿಗೆ ಹೋರಾಡುತ್ತಿದ್ದಾಗ, ಅವರು ಅಧಿಕ ರಕ್ತದೊತ್ತಡ, ಟೈಪ್ 1 ಮಧುಮೇಹ, ಆಸ್ತಮಾ, ಸಂಧಿವಾತ ವಿರುದ್ಧ ಹೋರಾಡಿದ್ದೆನು ಎಂದಿದ್ದಾರೆ.
2020ರಲ್ಲಿ ತನ್ನ ತಾಯಿ ಕೋವಿಡ್​ನಿಂದ ಮೃತಪಟ್ಟಿದ್ದರು. ತನ್ನ ತಾಯಿಯ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡುವ ವೇಳೆ ನನಗೆ ಪಿಪಿಇ ಸೂಟ್​ ಧರಿಸಲು ಹೇಳಿದ್ದರು. ಆದರೆ, ನನಗೆ ಅದು ಧರಿಸಲು ಆಗಲಿಲ್ಲ. ಆದಾಗ್ಯೂ ಎರಡು ಕಿಟ್​ ಧರಿಸಿ ತಾಯಿಯ ಅಂತ್ಯ ಸಂಸ್ಕಾರಕ್ಕೆ ತೆರಳಿದ್ದೇನು. ಆದರೆ, ಅಂತಿಮ ವಿಧಿ ವಿಧಾನಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಆ ದಿನ ಪಟ್ಟ ಯಾತನೆ ನನ್ನ ಜೀವಕ್ಕೆ ದೊಡ್ಡ ತಿರುವು ಕೊಟ್ಟಿತು. ಆ ದಿನ ನಾನು ಪ್ರತಿಜ್ಞೆ ಮಾಡಿದೆ ನನ್ನ ಜೀವನಕ್ಕಾಗಿ ಮತ್ತು ನನ್ನನ್ನು ನಂಬಿದ ತಾಯಿಗಾಗಿ ನಾನು ಇನ್ನು ಮುಂದೆ ಹೀಗೆ ಬದುಕುವುದಿಲ್ಲ ಎಂದು ಅವರು ನೆನಪಿಸಿಕೊಂಡರು.
ಯುವಕನ ಇನ್ಸ್ಟಾಗ್ರಾಮ್​ ಪೋಸ್ಟ್​ ನೋಡಲು ಇಲ್ಲಿ ಈ ಕೆಳಗಿನ ಲಿಂಕ್​ ಕ್ಲಿಕ್​​ ಮಾಡಿ...

ಇದು ನನ್ನ ಪುನರ್ಜನ್ಮ..!

ಅಲ್ಲಿಂದ "ಹೆಜ್ಜೆ ಹೆಜ್ಜೆಯಾಗಿ, ಬೆವರಿನ ಮೇಲೆ ಬೆವರು, ನೋವಿನ ಮೇಲೆ ನೋವು, ದಿನದಿಂದ ದಿನಕ್ಕೆ" ತನ್ನನ್ನು ತಾನು ಪುನರ್ನಿರ್ಮಿಸಿಕೊಳ್ಳುವ ಕಠಿಣ ಪ್ರಯಾಣ ಪ್ರಾರಂಭವಾಯಿತು. ಈ ಹಂತವು ಅಂತಿಮವಲ್ಲ. ಬೆಳೆಸಿದ ತಾಯಿಗೆ ನನ್ನ ಗೌರವ. ಇದು ತೂಕ ಇಳಿಸುವ ಪ್ರಯತ್ನವಲ್ಲ. ಇದು ಪುನರ್ಜನ್ಮ ಎಂದು ಸೇರಿಸುತ್ತಾರೆ. ಇದೀಗ, ಈಗ ನನ್ನ ತೂಕ 75 ಕೆಜಿ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

ತಾಯಿ ಕೊನೆ ಆಸೆಗಳಲ್ಲಿ ಇದು ಒಂದು

ಈ ರೂಪಾಂತರವು ಕೇವಲ ಒಂದು ಪ್ರಯಾಣವಲ್ಲ, ನನ್ನ ತಾಯಿ ನನಗೆ ಕಲಿಸಿದ ಎಲ್ಲದಕ್ಕೂ ಮತ್ತು ಅವರು ನನಗೆ ನೀಡಿದ ಪಾಲನೆಗೂ ಇದು ಗೌರವ. ಭರವಸೆ ಈಡೇರಿದೆ. ನಾನು ಫಿಟ್ ಆಗಿರುವುದನ್ನು ನೋಡುವುದು ಅವಳ ಕೊನೆಯ ಆಸೆಗಳಲ್ಲಿ ಒಂದಾಗಿದೆ, ಮತ್ತು ಇಂದು ನಾನು 85 ಕೆಜಿ ಕಡಿಮೆ ಆಗಿದ್ದೇನೆ, 160 ಕೆಜಿಯಿಂದ ನನ್ನ ಪ್ರಯಾಣವನ್ನು ಪ್ರಾರಂಭಿಸಿ 75 ಕೆಜಿ ದೇಹದ ತೂಕದಲ್ಲಿ ಈ ತಯಾರಿಯನ್ನು ಮುಗಿಸಿದ್ದೇನೆ ಎಂದಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net