ಕುಟುಂಬದವರ ಇಚ್ಛೆಯಂತೆ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲು ಅಥವಾ ಡಿಸ್ಚಾರ್ಜ್ ಮಾಡಲು ಆಸ್ಪತ್ರೆ ನಿರಾಕರಿಸುತ್ತಿದೆ. ಅಲ್ಲದೆ, ವಾಂಗ್‌ಚುಕ್ ಇರುವ ವಾರ್ಡ್‌ನ ಮಹಡಿಯಲ್ಲಿ ಸುಮಾರು 30 ಪೊಲೀಸರು ಹಾಗೂ ಆಸ್ಪತ್ರೆಯಾದ್ಯಂತ 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕುಟುಂಬದವರ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ವಾಂಗ್ಚುಕ್ ಪತ್ನಿ ದೂರಿದ್ದಾರೆ. ಇದು ವೈದ್ಯಕೀಯ ಆರೈಕೆಯಲ್ಲ, ಕಾನೂನುಬಾಹಿರ ಬಂಧನ. ಒಂದು ವೇಳೆ ಸೋನಮ್ ವಾಂಗ್ಚುಕ್ ಅವರಿಗೆ ಏನಾದರೂ ಆದರೆ ಅದಕ್ಕೆ ಆಸ್ಪತ್ರೆ ಆಡಳಿತ ಮಂಡಳಿ ಮತ್ತು ಸರ್ಕಾರವೇ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ವಾಂಗ್ಚುಕ್ ಆರೋಗ್ಯ ಮತ್ತಷ್ಟು ಹದಗೆಡುವ ಮುನ್ನವೇ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.