ಯಾವ ಪಕ್ಷದ ಹೆಸರನ್ನೂ ನೇರವಾಗಿ ಉಲ್ಲೇಖಿಸದ ಪ್ರಧಾನಿ ಮೋದಿ, ಹಿಂದಿನ ಸರ್ಕಾರಗಳು ರಾಜ್ಯಕ್ಕೆ ಮಾಡಿದ ಅನ್ಯಾಯವನ್ನು ಬಿಚ್ಚಿಟ್ಟರು. ಆದರೆ ರಾಜ್ಯವು ಈಗ ಹೊಸ ಭರವಸೆ ಮತ್ತು ಪ್ರಗತಿಗೆ ಸಾಕ್ಷಿಯಾಗುತ್ತಿದೆ. ಬಂಗಾಳದ ಗಾಳಿಯಲ್ಲಿ ಈಗ ಹೊಸ ತಾಜಾತನವಿದ್ದು, ರಾಜ್ಯವು ಕೊನೆಗೂ ಸರಪಳಿಗಳಿಂದ ಮುಕ್ತವಾದಂತೆ ಭಾಸವಾಗುತ್ತಿದೆ ಎನ್ನುತ್ತಾ, ಈ ಐತಿಹಾಸಿಕ ಪಶ್ಚಿಮಬಂಗಾ ದಿವಸ್ ಪಶ್ಚಿಮ ಬಂಗಾಳದ ಸೌಹಾರ್ದಯುತ ಅಭಿವೃದ್ಧಿಗೆ ದೊಡ್ಡ ಪ್ರೇರಣೆಯಾಗಲಿ ಎಂದು ಆಶಿಸಿದರು. ಇದೇ ವೇಳೆ ಗಡಿ ಸುರಕ್ಷತೆಯ ವಿಷಯವನ್ನು ಪ್ರಸ್ತಾಪಿಸಿದ ಮೋದಿ, ಬಂಗಾಳದ ಹಿಂದಿನ ಸರ್ಕಾರವು ದೇಶದ ಗಡಿ ಬೇಲಿ ನಿರ್ಮಾಣ ಯೋಜನೆಗಾಗಿ ಭೂಮಿ ಹಸ್ತಾಂತರಿಸುವುದನ್ನು ತಡೆಹಿಡಿದಿತ್ತು. ಆದರೆ ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ ಬಳಿಕ ಆ ಪ್ರಕ್ರಿಯೆ ವೇಗವಾಗಿ ಆರಂಭವಾಗಿದೆ ಎಂದು ಪ್ರಮುಖ ಮಾಹಿತಿ ನೀಡಿದರು(ಏಜೆನ್ಸೀಸ್).