ವಾದ-ಪ್ರತಿವಾದ ಆಲಿಸಿದ ಇಮಿಗ್ರೇಷನ್ ನ್ಯಾಯಾಧೀಶರು, ಮೇ 19ರಂದು ವಾಸಂಶೆಟ್ಟಿ ಪರವಾಗಿ ತೀರ್ಪು ಘೋಷಿಸಿ, ಮಹಿಳೆಯು ತಮ್ಮ ಶಾಶ್ವತ ನಿವಾಸಿ ಹಕ್ಕನ್ನು ತ್ಯಜಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿತು. ಇದರ ಜತೆಗೆ ಮುಖ್ಯವಾಗಿ, ಅವರ ವಿರುದ್ಧದ ಗಡಿಪಾರು ಪ್ರಕರಣವನ್ನು ರದ್ದುಗೊಳಿಸಿತು. ಆದರೀಗ, ಕೋರ್ಟ್ ಆದೇಶವಿದ್ದರೂ ICE ಅಧಿಕಾರಿಗಳು ವಾಸಂಶೆಟ್ಟಿ ಅವರನ್ನು ಬಂಧಿಸಿರುವುದು ಕಾನೂನುಬಾಹಿರ ಮತ್ತು ಮಹಿಳೆಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ವಕೀಲರು ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ,(ಏಜೆನ್ಸೀಸ್).